ವಯಸ್ಸು 24 ತೂಕ ಮಾತ್ರ 436 ಕೆ.ಜಿ

ವಯಸ್ಸು 24 ತೂಕ ಮಾತ್ರ 436 ಕೆ.ಜಿ

ಈತನಿಗೆ ವಯಸ್ಸು 24 ಆದ್ರೆ ಇವನ ತೂಕ ಬರೋಬ್ಬರಿ 436 ಕೆ.ಜಿ ಈ ದಡೂತಿ ದೇಹ ಹೊತ್ತುಕೊಂಡು ರೆಸ್ಲಿಂಗ್ ಆಡಬೇಕು ಎಂಬುವುದು ಇವನ ಆಸೆ. ಅದಕ್ಕಾಗಿ ಬಹಳ ಕಸರತ್ತು ಕೂಡ ನಡೆಸುತ್ತಿದ್ದಾನೆ.

ಇವರು ಮಹಾಬಾರತದಲ್ಲಿ ಬಂಡಿ ಅನ್ನ ತಿನ್ನುತ್ತಿದ್ದ ಬಕಾಸುರನಿಗೇನೂ ಕಡಿಮೆ ಇಲ್ಲ. ಈತನ ವಯಸ್ಸು 24 ಆದ್ರೆ ತೂಕ ಮಾತ್ರ 436 ಕೆ.ಜಿ. ದಿನಕ್ಕೆ 4 ಕೋಳಿ, 5 ಲೀಟರ್ ಹಾಲು, 36 ಮೊಟ್ಟೆ ಸೇವಿಸುತ್ತಾರೆ. ಇಷ್ಟೆಲ್ಲಾ ಆಹಾರ ತಿಂದು   ಈ ದಡೂತಿ ದೇಹ ಬೆಳಿಸಿಕೊಂಡಿದ್ದಾನೆ. ತೂಕ ಕಡಿಮೆ ಮಾಡಿಕೊಳಲ್ವಾ ಅಂತಾ ಕೇಳಿದ್ರೆ ಈತ ಹೇಳೋದು ನನಗೆ ರೆಸ್ಲಿಂಗ್ ಅಂದ್ರೆ ತುಂಬಾ ಇಷ್ಟ ಅದಕ್ಕಾಗಿ ಈ ದೇಹ ಬೆಳೆಸಿಕೊಂಡಿದ್ದೇನೆ ಅಂತಾ ಹೇಳ್ತಾರೆ. ಒಂದೇ ಕೈಯಲ್ಲಿ ಮನುಷ್ಯನನ್ನು ಎತ್ತಿಕೊಳ್ಳುವಷ್ಟು ಶಕ್ತಿಶಾಲಿ ಈ ಖಾನ್ ಬಾಬಾ. 2012 ರಲ್ಲಿ ಜಪಾನ್ ನಲ್ಲಿ ನಡೆದ ರೆಸ್ಲಿಂಗ್ ನಲ್ಲಿ ಭಾಗವಹಿಸಿದ್ದ ಖಾನ್, ಅಮೆರಿಕದಲ್ಲಿ ನಡೆಯುವ ಸ್ಪರ್ಧೆಗೆ ತಯಾರಿ ನಡೆಸಿದ್ದಾನೆ.

Leave a Reply

Your email address will not be published. Required fields are marked *