ಪಾಕ್ ಮಣಿಸಿದ ಭಾರತೀಯ ಮಹಿಳಾ ಕ್ರಿಕೆಟ್ ಕಲಿಗಳು

ಪಾಕ್ ಮಣಿಸಿದ ಭಾರತೀಯ ಮಹಿಳಾ ಕ್ರಿಕೆಟ್ ಕಲಿಗಳು

ಭಾರತದ ಮೇಲೆ ಕೆಂಡ ಕಾರುತ್ತಿರುವ ಪಾಕಿಸ್ತಾನ ಮತ್ತೊಮ್ಮೆ ಮಣ್ಣು ಮುಕ್ಕಿದೆ. ಕ್ರೀಡೆಯಲ್ಲಿ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ತಾನವನ್ನು ಭಾರತದ ವೀರ ವನಿತೆಯರು ಸೋಲಿಸಿದ್ದಾರೆ. ಈ ಬಾರಿ ಪಾಕಿಸ್ತಾನ ಸೋತಿರುವುದು ಮಹಿಳಾ ಕ್ರಿಕೆಟ್ ನಲ್ಲಿ. ಭಾರತ ಸಂಭ್ರಮಿಸುವಂತ ಆಟ ಆಡಿದ್ದಾರೆ ಭಾರತೀಯ ಮಹಿಳಾ ಕ್ರಿಕೆಟ್ ಮಣಿಗಳು.

ಮಹಿಳೆಯರ ಟಿ 20 ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಬ್ಯಾಂಕಾಕ್ ನ ಏಷ್ಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತೀಯ ಮಹಿಳೆಯರು 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದ್ರು. 122 ರನ್ ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 104 ರನ್ ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ  17 ರನ್ ಗಳಿಂದ ಭಾರತಕ್ಕೆ ಶರಣಾಯಿತು. ಭಾರತ ಪರ ಮಿಥಾಲಿ ರಾಜ್ 65 ಬಾಲ್ ಗೆ 73 ರನ್ ಗಳಿಸಿದ್ರು. ಸರಣಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ ಮಿಥಾಲಿ ರಾಜ್ ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *