ಹಾರ್ಟ್ ಆಪರೇಷನ್ ಬಳಿಕ ಹಳೆ ಹೃದಯವನ್ನು ಕಣ್ಣೀರಿಡ್ತಾ ಮಣ್ಣು ಮಾಡಿದ್ಳು!

0
7

ಜೆರುಸಲೇಂ: ಕಲಾವಿದೆಯೊಬ್ಬರು ಹೃದಯಾಘಾತದಿಂದ ಬಳಲಿ, ಸರ್ಜರಿ ಮಾಡಿಸಿಕೊಂಡ ನಂತರ ತನ್ನದೇ ಹಳೇ ಹೃದಯವನ್ನ ನಡುಗುವ ಕೈಯಲ್ಲಿ ಕಣ್ಣೀರಿಡುತ್ತಾ ಮಣ್ಣು ಮಾಡೋ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಮೂರು ತಿಂಗಳ ಹಿಂದಷ್ಟೇ ಶರೋನ್ ಫಿಡೆಲ್‍ಗೆ ಹೃದಯ ಕಸಿ ಮಾಡಲಾಗಿತ್ತು. ಕಾರ್ ಅಪಘಾತವೊಂದರಲ್ಲಿ ಮೃತಪಟ್ಟ 16 ವರ್ಷದ ವ್ಯಕ್ತಿಯ ಹೃದಯವನ್ನು ಶರೋನ್‍ಗೆ ಜೋಡಿಸಲಾಗಿತ್ತು. ಇಸ್ರೇಲ್ ಮೂಲದವಾರದ 46 ವರ್ಷದ ಶರೋನ್, ತನ್ನ ಹಳೇ ಹೃದಯವನ್ನ ಮಣ್ಣು ತೋಡಿ ಹೂಳುವ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ಬಕೆಟ್‍ನಿಂದ ಹೃದಯವನ್ನ ತೆಗೆಯೋವಾಗ ಆಕೆಯ ಕೈಗಳು ನಡುಗೋದನ್ನ ಕಾಣಬಹುದು. ಎರಡು ಮೂರು ಬಾರಿ ಹೃದಯವನ್ನ ತೆಗೆದುಕೊಳ್ಳಲು ಹಿಂಜರಿದು ಕೊನೆಗೆ ಆಕೆ ಅದನ್ನ ಕೈಯಲ್ಲಿ ಹಿಡಿದು ಮಣ್ಣಿನಲ್ಲಿ ಇಟ್ಟಿದ್ದಾರೆ. ಈ ವಿಡಿಯೋದ ಜೊತೆಗೆ, ನನ್ನ ಪ್ರಾಣವನ್ನು ಉಳಿಸಿದ ವ್ಯಕ್ತಿಗೆ ಧನ್ಯವಾದ ಎಂದು ಶರೋನ್ ಬರೆದಿದ್ದಾರೆ. ಕೊನೆಗೆ ತನ್ನ ವಿಗ್ ತೆಗೆದು ತನ್ನದೇ ಹೃದಯದ ಸಮಾಧಿ ಬಳಿ ಮಂಡಿಯೂರಿ ಕುಳಿತು ಅಳೋದನ್ನ ಕಾಣಬಹುದು.

ಇಸ್ರೇಲಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಶರೋನ್, ಈ ವಿಡಿಯೋದಲ್ಲಿ ಇರೋದೆಲ್ಲವೂ ಸತ್ಯ. ಹೃದಯವನ್ನ ಮಣ್ಣಿಗೆ ಹಾಕುವಾಗ ನಾನು ನಡುಗುತ್ತಿದೆ. ನನ್ನದೇ ಅಂಗವನ್ನ ಮುಟ್ಟಲು, ಮೇಲೆತ್ತಲು ನನಗೆ ತುಂಬಾ ಭಯವಾಗಿತ್ತು. ಆದ್ದರಿಂದಲೇ ನನ್ನ ಕೈ ನಡುಗುತ್ತಿತ್ತು ಎಂದು ಹೇಳಿದ್ದಾರೆ.