‘ಅವಳಿ’ಗೆ ಅವನೊಬ್ಬನೇ ಗಂಡ

‘ಅವಳಿ’ಗೆ ಅವನೊಬ್ಬನೇ ಗಂಡ

ಅವಳಿಗಳು ಅವಳಿಗಳನ್ನು ಮದುವೆಯಾಗುವುದನ್ನು ಕೇಳಿದ್ದೇವೆ, ಆದ್ರೆ ಅವಳಿ ಹುಡುಗಿಯರು ಒಂದೇ ಹುಡುಗನನ್ನು ಮದುವೆಯಾಗುತ್ತಾರೆ ಅಂದ್ರೆ ತಲೆ ಕೆರೆದುಕೊಳ್ಳಬೇಕಲ್ಲವೇ.ಒಬ್ಬ ಪುರುಷ ಎರಡೇನು ನಾಲ್ಕು ಮದುವೆಯಾಗಿ ಜೊತೆಗೆ ಸಂಸಾರ ಮಾಡುತ್ತಿರುವುದು ವಿಶೇಷವಲ್ಲ. ಆದ್ರೆ ಕಲಿಯುಗದಲ್ಲಿ ಈ ಅವಳಿಗಳ ಮದುವೆ ಸ್ಟೋರಿ ಸ್ವಲ್ಪ ಡಿಫರೆಂಟ್ ಆಗಿದೆ.

ಇವರು ಆಸ್ಟ್ರೇಲಿಯಾದ ಪರ್ತ್‌ನ ಅವಳಿ ಮಹಿಳೆಯರಾದ ಆ್ಯನಾ ಹಾಗೂ ಲೂಸಿಯ. ಚಿಕ್ಕವರಿದ್ದಾಗ ಎಲ್ಲರಂತೆ ಓದು ಕಲಿಕೆ ಎಲ್ಲವೂ ಇತ್ತು. ಬೆಳೆದಂತೆ ಢಿಪರೆಂಟ್ ಸಿಸ್ಟರ್ ಗಳೆಂದು ಗುರುತಿಸಿಕೊಳ್ಳಬೇಕು ಅನ್ನುವುದು ಇವರ ಬಯಕೆಯಾಗಿತ್ತು.ಈ ಸಲುವಾಗಿ ಸೌಂದರ್ಯ ವರ್ಧಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಹಾಟ್ ಲುಕ್ ಗೆ ಬದಲಾಗಿದ್ದಾರೆ. ಒಂದೇ ಫೇಸ್ ಬುಕ್ ಅಕೌಂಟ್, ಒಂದೇ ಬೆಡ್ ರೂಂ,ಒಂದೇ ತಟ್ಟೆ ಹೀಗೆ ಇವರು ಇರುವುದು ಇಬ್ಬರಾದ್ರು ಬೇಕಾಗಿರುವುದು ಒಂದೇ. ಹೀಗಾಗಿ ಒಂದೇ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಶಾಕಿಂಗ್ ಸುದ್ದಿ ಇದ್ದಲ್ಲ. ಮದುವೆಯಾಗುವ ಹುಡುಗನೊಂದಿಗೆ 5 ವರ್ಷಗಳಿಂದ ಡೇಟಿಂಗ್‌ ಬೇರೆ ಮಾಡುತ್ತಿದ್ದಾರೆ. ಜೊತೆಗೆ ಎಲ್ಲವೂ ಮುಗಿಸಿಬಿಟ್ಟಿದ್ದಾರೆ.ಈ ಹುಡುಗಿಯರು ಹೇಳುವ ಪ್ರಕಾರ ಮದುವೆಯಾಗುತ್ತಿರುವ ಬೆನ್‌ ಬೈರೆ ಹುಡುಗ ಅದೃಷ್ಟವಂತನಂತೆ. ಇನ್ನೂ ಶಾಕಿಂಗ್ ಅಂದ್ರೆ ಸಹೋದರಿಯು ಏನೇ ಮಾಡಿದ್ರು ಒಟ್ಟಿಗೆ ಮಾಡುವುದಂತೆ. ಗರ್ಭಿಣಿಯರಾಗುವುದೂ ಕೂಡಾ ಒಟ್ಟಿಗೆಯಂತೆ. ಏನ್ ಕಾಲ ಬಂತು ನೋಡಿ.

Leave a Reply

Your email address will not be published. Required fields are marked *