7 ಬಾಟ್ಲಿ ಬಿಯರ್ ಒಮ್ಮೆಯೇ ಕುಡಿಯೋದನ್ನು ನೋಡಿದ್ದೀರಾ…?

0
4

ವೆಲ್ಲಿಂಗ್ಟನ್: ಒಂದೇ ಸಲಕ್ಕೆ ಬಾಟಲಿಯನ್ನ ಎತ್ತಿ ಬಿಯರ್ ಅಥವಾ ಕೂಲ್ ಡ್ರಿಂಕ್ಸ್ ಕುಡಿದು ಮುಗಿಸೋ ಚಾಲೆಂಜ್‍ಗಳ ಬಗ್ಗೆ ಕೇಳಿರ್ತೀರ, ನೋಡಿರ್ತೀರ. ಆದ್ರೆ ಇಲ್ಲೊಬ್ಬ ಹತ್ತೇ ಹತ್ತು ಸೆಕೆಂಡ್‍ಗಳಲ್ಲಿ 7 ಬಿಯರ್ ಬಾಟಲಿಗಳಿಂದ ಒಂದೇ ಸಲಕ್ಕೆ ಬಿಯರ್ ಕುಡಿದು ಮುಗಿಸಿದ್ದಾನೆ. 7 ಬಾಟಲಿಗಳನ್ನ ಒಂದೇ ಸಲಕ್ಕೆ ಬಾಯಿಗೆ ಇಡೋದು ಹೇಗೆ ಅಂದ್ರಾ? ಅದಕ್ಕಾಗಿ ಆತ ಒಂದು ಸಿಂಪಲ್ ಟ್ರಿಕ್ ಬಳಸಿದ್ದಾನೆ.

ನ್ಯೂಜಿಲ್ಯಾಂಡ್‍ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಮುಂದೆ ಇಂತಹದ್ದೊಂದು ಸವಾಲು ಪೂರೈಸಿದ್ದಾನೆ. ಮೊದಲಿಗೆ 7 ಬಾಟಲಿಗಳನ್ನ ಹತ್ತಿರ ಜೋಡಿಸಿದ್ದಾನೆ. ದೊಡ್ಡ ನೀರಿನ ಬಾಟಲಿಯ ಕೆಳಭಾಗವನ್ನ ಕಟ್ ಮಾಡಿ ಬಾಟಲಿಗಳ ಮೇಲೆ ಇಟ್ಟಿದ್ದಾನೆ. ನೀರಿನ ಬಾಟಲಿ ಬಿಯರ್ ಬಾಟಲಿಗಳನ್ನ ಒಂದುಗೂಡಿಸಿ ಹಿಡಿದುಕೊಂಡಿದ್ದು ಅದರ ತುದಿಭಾಗದಿಂದ ಆತ ಒಂದೇ ಸಲಕ್ಕೆ ಬಿಯರ್ ಕುಡಿದು ಮುಗಿಸಿದ್ದಾನೆ.

ಇದನ್ನ ಆತನ ಸ್ನೇಹಿತರು ವಿಡಿಯೋ ಮಾಡಿದ್ದಾರೆ. ಬಿಯರ್ ಕುಡಿಯುತ್ತಿರುವ ವ್ಯಕ್ತಿಯನ್ನ ಬೈದು ಛೇಡಿಸಿದ್ದಾರೆ. ಆಸ್ಟ್ರೇಲಿಯಾದ ಫೇಸ್‍ಬುಕ್ ಪೇಜ್ ದಿ ಬೆಲ್ ಟವರ್ ಟೈಮ್ಸ್ ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.