ಹೃತಿಕ್ ರೋಷನ್ ಡ್ರೀಮ್ ಹೌಸ್ ಹೇಗಿದೆ ಗೊತ್ತಾ?

0
2

ಮುಂಬೈ: ಬಾಲಿವುಡ್ ಸ್ಮಾರ್ಟ್ ಆ್ಯಂಡ್ ಸ್ಟೈಲಿಶ್ ನಟ ಹೃತಿಕ್ ರೋಷನ್ ತಮ್ಮ ಮನೆಯನ್ನ ಡ್ರೀಮ್‍ಹೌಸ್‍ನಂತೆ ವಿನ್ಯಾಸಗೊಳಿಸಿದ್ದಾರೆ. ಈ ಮನೆಯಲ್ಲಿ ಮಕ್ಕಳಿಗಾಗಿಯೇ ಕೆಲವೊಂದು ವಿನ್ಯಾಸ ಮಾಡಲಾಗಿದೆ.

ಪತ್ನಿ ಸುಝೇನ್ ಖಾನ್‍ರೊಂದಿಗೆ ವಿಚ್ಛೇದನವಾದ ಬಳಿಕ ಮುಂಬೈನ ಜುಹು ಬೀಚ್‍ನಲ್ಲಿ ಹೃತಿಕ್ 3000 ಚದರ ಅಡಿ ವಿಸ್ತಾರವುಳ್ಳ ಫ್ಲ್ಯಾಟ್ ಖರೀದಿಸಿದ್ದಾರೆ. ಫ್ಲ್ಯಾಟ್ ಬಾಲ್ಕನಿಯಿಂದ ಸಮುದ್ರ ಕಡಲ ಕಿನಾರೆ ಕಾಣುತ್ತದೆ. ಹೃತಿಕ್ ಮಕ್ಕಳಿಗೆ ಇಷ್ಟವೆನಿಸುವಂತೆ ಮನೆಯ ವಸ್ತು ಚಿತ್ರಣವನ್ನು ಚೇಂಜ್ ಮಾಡಿದ್ದಾರೆ. ಈ ಫ್ಲ್ಯಾಟ್ ನಲ್ಲಿ ಒಟ್ಟು ನಾಲ್ಕು ಕೋಣೆಗಳಿದ್ದು, ಪ್ರತಿಯೊಂದು ಕೋಣೆಯೂ ವಿಭಿನ್ನವಾಗಿದೆ.

ಹೃತಿಕ್ ಮನೆಯ ವರಾಂಡದಲ್ಲಿ ಆರಾಮದಾಯಕ ಸೋಫಾಗಳನ್ನು ಇರಿಸಿದ್ದಾರೆ. ಮಧ್ಯದಲ್ಲಿ ನೀಲಿ ಬಣ್ಣದ ಕಾರ್ಪೆಟ್, ಮೇಜಿನ ಮೇಲೆ ಕೃತಕ ಕಲಾಕೃತಿಗಳನ್ನು ಇರಿಸಿದ್ದಾರೆ. ಇನ್ನು ಲಿವಿಂಗ್ ರೂಮಿನಲ್ಲಿ ಮಕ್ಕಳೊಂದಿಗಿನ ತಮ್ಮ ಸುಂದರ ಫೋಟೋಗಳನ್ನು ಗೋಡೆಯ ಮೇಲೆ ಅಂಟಿಸಿದ್ದಾರೆ. ಈ ನಾಲ್ಕು ಕೋಣೆಗಳಲ್ಲಿ ಒಂದನ್ನು ತಮ್ಮ ಆಫೀಸ್ ರೂಮ್ ಜೊತೆಗೆ ಮಕ್ಕಳ ಸ್ಟಡಿ ರೂಮ್ ಸಹ ಮಾಡಿಕೊಂಡಿದ್ದಾರೆ.

ಮಕ್ಕಳಿಗೆ ಓದುವುದರ ಜೊತೆಗೆ ಆಟ ಆಡಲು ಬಿಲಿಯಡ್ರ್ಸ ಗೇಮ್‍ನ ಟೇಬಲ್ ಇರಿಸಿದ್ದಾರೆ. ಒಂದು ಗೋಡೆಯಲ್ಲಂತೂ world map ಚಿತ್ರವನ್ನೇ ಕಾಣಬಹುದಾಗಿದೆ. ಇದರ ಜೊತೆಗೆ ಮಕ್ಕಳಿಗೆ ಆಕರ್ಷಣೆಯಾಗುವಂತಹ ಕಲರ್ ಬಳಸಿ, ಗೋಡೆಯ ಮೇಲೆ ಪೇಂಟ್ ಮಾಡಿಸಿದ್ದಾರೆ.