ಪರೀಕ್ಷೆ ಹತ್ತಿರ ಬಂದ್ರು ಪಠ್ಯ ಪುಸ್ತಕವೇ ಬಂದಿಲ್ಲ

ಪರೀಕ್ಷೆ ಹತ್ತಿರ ಬಂದ್ರು ಪಠ್ಯ ಪುಸ್ತಕವೇ ಬಂದಿಲ್ಲ

ಸಿದ್ದರಾಮಯ್ಯ ಸರ್ಕಾರ ಸುಳ್ಳು ಹೇಳಿದಷ್ಟು ಯಾವ ಸರ್ಕಾರವೂ ಹೇಳಿಲ್ಲ ಅನ್ನುವುದು ಸ್ಪಷ್ಟ. ಸಿದ್ದು ಸಂಪುಟದಲ್ಲಿರುವ ಪ್ರತೀ ಮಂತ್ರಿಯೂ ಸುಳ್ಳು ಹೇಳುವುದರಲ್ಲಿ ನಿಪುಣರು. ಅದರಲ್ಲೂ ಕನ್ನಡದ ವಿಚಾರದಲ್ಲಿ ಸಿದ್ದರಾಮಯ್ಯ ಸಂಪುಟ ಮಾಡುತ್ತಿರುವ ತಪ್ಪುಗಳನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಸರ್ಕಾರವೇ ಕನ್ನಡದ ಕತ್ತು ಹಿಸುಕುತ್ತಿದೆ.

ಮೂರು ತಿಂಗಳು ಕಳೆದ್ರೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ. ಆದ್ರೆ ಬಳ್ಳಾರಿ ಗಡಿನಾಡ ಮಕ್ಕಳಿಗೆ ಪಠ್ಯ ಪುಸ್ತಕವೇ ಸಿಕ್ಕಿಲ್ಲ. ಕನ್ನಡ ಕಲಿಯಲು ವಿದ್ಯಾರ್ಥಿಗಳು ಸಿದ್ದರಿದ್ದಾರೆ. ಆದ್ರೆ ಶಿಕ್ಷಕರಿಲ್ಲ. ಶಿಕ್ಷಕರಿದ್ರೆ ಪಠ್ಯ ಪುಸ್ತಕವೇ ಬಂದಿಲ್ಲ. ಇಂದು ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೊಂದು ಉದಾಹರಣೆ. ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕ ಪೂರೈಸಲಾಗದ ಇಲಾಖೆಗೆ ಮಂತ್ರಿ, ಕಾರ್ಯದರ್ಶಿ, ನಿರ್ದೇಶಕರು ಬೇರೆ ಕೇಡು. ಬಳ್ಳಾರಿಯ ಆಂಧ್ರ ಗಡಿ ಭಾಗದ ಕರ್ನೂಲ್, ಅನಂತಪುರ, ಮೆಹಬೂಬ್ ನಗರ,ಮೇದಕ್ ಹೀಗೆ ಹಲವು ಗ್ರಾಮಗಳಲ್ಲಿ ಜನ ಕನ್ನಡ ಉಸಿರಾಡುತ್ತಿದ್ದಾರೆ. ಆದ್ರೆ ನಮ್ಮ ಸರ್ಕಾರ ಮಾತ್ರ ಅವರ ಕನ್ನಡ ಪ್ರೀತಿಯನ್ನು ಕೊಲೆ ಮಾಡಲು ಹೊರಟಿದೆ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಕಳುಹಿಸಿವುದು ಸರ್ಕಾರದ ಕರ್ತವ್ಯ. ಆದ್ರೆ ಮಂತ್ರಿಗಳಿಗೆ ಈ ಕಾರ್ಯದ ಮೇಲೆ ನಿಗಾ ವಹಿಸಬೇಕು ಅನ್ನುವ ಕನಿಷ್ಟ ಜ್ಞಾನವಿಲ್ಲ. ಇದನ್ನು ದುರಂತ ಅನ್ನದೇ ವಿಧಿಯಿಲ್ಲ. ಯಾವ ಕರ್ಮಕ್ಕಾಗಿ ಇವರು ಮಂತ್ರಿ ಸ್ಥಾನದಲ್ಲಿ ಕೂರಬೇಕು ಹೇಳಿ. ಕೆಲಸ ಮಾಡಲು ಸಾಧ್ಯವಿಲ್ಲ ಅನ್ನುವುದಾದ್ರೆ ಮನೆಗೆ ನಡೆಯಲಿ.

 

 

 

Leave a Reply

Your email address will not be published. Required fields are marked *