ಶಿಕ್ಷಕಿಯೋ..? ರಾಕ್ಷಸಿಯೋ..?

ಶಿಕ್ಷಕಿಯೋ..? ರಾಕ್ಷಸಿಯೋ..?

ಈಕೆ ವೃತ್ತಿಯಲ್ಲಿ ಶಿಕ್ಷಕಿ ಆದರೆ ಪುಟ್ಟ ಮಕ್ಕಳು ಡ್ಯಾನ್ಸ್ ಸ್ಟೆಪ್ ಮರೆತಿದ್ದಕ್ಕೆ ಹೇಗೆ ಹಲ್ಲೆ ಮಾಡಿದ್ದಾಳೆ ನೋಡಿ. ಇದು ಚೀನಾದ ನರ್ಸರಿ ಸ್ಕೂಲಿನಲ್ಲಿ ನಡೆದ ಘಟನೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಈಕೆಯನ್ನ ಕೆಲಸದಿಂದ ವಜಾ ಮಾಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಚೀನಾದಲ್ಲಿ ಮಕ್ಕಳ ಜೊತೆ ಹೇಗೆ ಶಿಕ್ಷಕರು ಹೇಗೆ ವರ್ತಿಸುತ್ತಾರೆ ನೋಡಿ. ಈ ವಿಡಿಯೋದಲ್ಲಿ ಮಕ್ಕಳ ಮೇಲೆ ಶಿಕ್ಷಕಿಯೊಬ್ಬಳು ಹೇಗೆ ಹಲ್ಲೆ ಮಾಡುವುದನ್ನ ನೋಡಿದ್ರೆ ಎಂತವರಿಗಾದ್ರುಶಾಕ್ ಆಗುತ್ತೆ. ನರ್ಸರಿಯಲ್ಲಿ ಓದುತ್ತಿರುವ ಪುಟ್ಟ ಮಕ್ಕಳ ಮೇಲೆ ತನ್ನ ರಾಕ್ಷಸ ಕೃತ್ಯ ಪ್ರದರ್ಶಿಸಿದ್ದಾಳೆ. ಇದು ಚೀನಾದ ನರ್ಸರಿ ಸ್ಕೂಲಿನ ನಡೆದಿರುವ ಘಟನೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮಕ್ಕಳಿಗೆ ಡ್ಯಾನ್ಸ್ ಕಲಿಸುವ ವೇಳೆ ಈ ಪುಟಾಣಿ ಮಕ್ಕಳು ಸ್ಟೆಪ್ಸ್ ಮರೆತು ಬಿಡುತ್ತಾರೆ. ಈ ವೇಳೆ ಕೋಪಗೊಂಡ ಡ್ಯಾನ್ಸ್ ಟೀಚರ್ ಮಕ್ಕಳ ಕೂದಲು ಹಿಡಿದು ಎಳೆದು ಹಲ್ಲೆ ಮಾಡಿದ್ದಾಳೆ. ಕ್ರಿಸ್ ಮಸ್ ನ ರಡು ದಿನ ಮುಂಚೆ ನಡೆದಿರುವ  ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕಿಯನ್ನ ಸ್ಕೂಲಿನಿಂದ ವಜಾಗೊಳಿಸಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

 

Leave a Reply

Your email address will not be published. Required fields are marked *