2 ವಾರಕ್ಕೆ 35 ಕೋಟಿ ಹಿಟ್ಸ್ ಬರುವಂಥದ್ದೇನಿತ್ತು ಈ ವೀಡಿಯೋದಲ್ಲಿ..?

0
7

ಬೆಂಗಳೂರು: ಪಾಪ್ ಹಾಡುಗಳೆಂದರೆ ಇಂದಿನ ಯುವ ಪೀಳಿಗೆಗ ಅಚ್ಚುಮೆಚ್ಚು. ಹಾಲಿವುಡ್ ಪಾಪ್ ಸ್ಟಾರ್ ಟೇಲರ್ ಸ್ವಿಫ್ಟ್ ರಚನೆಯ ‘ಲುಕ್ ವಾಟ್ ಯೂ ಮೇಡ್ ಮಿ ಡು’ ಅಲ್ಬಮ್ ವಿಡಿಯೋ ಯೂಟ್ಯೂಬ್ ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.

ಹಾಲಿವುಡ್ ಪಾಪ್ ಸ್ಟಾರ್ ಟೇಲರ್ ಸ್ವಿಫ್ಟ್ ಎಂದಿನಂತೆ ತಮ್ಮ ಹೊಸತನವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈಗಾಗಲೇ 10 ಬಾರಿ ಗ್ರಾಮಿ ಅವಾರ್ಡ್ ಪಡೆದಿರುವ ಟೇಲರ್ ಮತ್ತೊಮ್ಮೆ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರದಿದ್ದಾರೆ. ಯುವ ಪೀಳಿಗೆಯನ್ನು ಸರಿಯಾಗಿ ಅರಿತಿರುವ ಟೇಲರ್ ಹಿತವಾದ ಸಂಗೀತವನ್ನು ಒಳಗೊಂಡ ಅಲ್ಬಂ ಹೊರ ತಂದಿದ್ದಾರೆ.

ಟೇಲರ್ ಅವರೇ ಅಲ್ಬಂ ನಿರ್ಮಾಣ ಮಾಡಿದ್ದು, ಯೂಟ್ಯೂಬ್ ಮತ್ತು ವೆವೋಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಟೇಲರ್ ನಿರ್ಮಾಣದ `ಬ್ಯಾಡ್ ಬ್ಲಡ್’ ಒಂದು ದಿನದಲ್ಲಿ 17 ಕೋಟಿ ವೀಕ್ಷಣೆಯಾಗಿ ದಾಖಲೆ ಬರೆದಿತ್ತು. ಇಂದು ಟೇಲರ್ ಹೊಸ ಅಲ್ಬಂ ಒಂದೇ ದಿನದಲ್ಲಿ 19 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿ ಹೊಸ ದಾಖಲೆ ಬರೆದಿದೆ.