ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸ್ಫೋಟ – ಅಪಾಯದಿಂದ ಪಾರು

0
3

ಕಾನ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಸಂಚರಿಸುತ್ತಿದ್ದ ರೇಂಜ್ ರೋವರ್ ಕಾರಿನ ಟೈರ್ ಸಿಡಿದಿದ್ದು, ಅದೃಷ್ಟವಶಾತ್ ರೈನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುರೇಶ್ ರೈನಾ ಅವರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಲು ಘಾಜಿಯಾಬಾದ್ ನಿಂದ ಕಾನ್ಪುರ್‍ಗೆ ರೇಂಜ್ ರೋವರ್ ಕಾರಲ್ಲಿ ತೆರಳುತ್ತಿದ್ದರು. ಈ ವೇಳೆ ಇಟಾವಾ ಬಳಿ ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ಸ್ಥಳೀಯ ಪೊಲೀಸರು ರೈನಾಗೆ ಮತ್ತೊಂದು ವಾಹನದ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ. ಘಟನೆಯಲ್ಲಿ  ರೈನಾ ಅವರಿಗೆ ಯಾವುದೇ ತರಹದ ಗಾಯಗಳಾಗಿಲ್ಲ ಎಂದು ಡಿಎಸ್‍ಪಿ ರಾಜೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇಟಾವಾದ ಫ್ರೆಂಡ್ಸ್ ಕಾಲೋನಿ ಬಳಿ ಅಪಘಾತ ನಡೆದಿದೆ. ಕಾರಿನ ಹಿಂಬದಿ ಟೈರ್ ಸ್ಫೋಟಗೊಂಡಿದೆ. ಆದರೆ ಕಾರಿನಲ್ಲಿ ಸ್ಟೆಪ್ನಿ ಇಲ್ಲದ ಕಾರಣ ರೈನಾಗೆ ಬದಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

✌️👀

A post shared by Suresh Raina (@sureshraina3) on

After months of hard work it’s time for an evaluation. Off to NCA! Looking forward. #enroute #Bangalore ✈️

A post shared by Suresh Raina (@sureshraina3) on

LEAVE A REPLY

Please enter your comment!
Please enter your name here