ಸಿದ್ದರಾಮಯ್ಯ ಅಕ್ರಮ ಬಯಲು ಮಾಡುವೆ: ಯಡಿಯೂರಪ್ಪ

ಸಿದ್ದರಾಮಯ್ಯ ಅಕ್ರಮ ಬಯಲು ಮಾಡುವೆ: ಯಡಿಯೂರಪ್ಪ

ಸಿದ್ದರಾಮಯ್ಯ ಅವರ ಅಕ್ರಮವನ್ನ ದಾಖಲೆ ಸಮೇತ ಬಯಲು ಮಾಡುವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಆಪ್ತರು ಐಟಿ ದಾಳಿಯಲ್ಲಿ ಸಿಕ್ಕಿಬಿದ್ದಿರೋದ್ರಿಂದ ಇಬ್ಬರ ಮುಖವಾಡ ಕಳಚಿಬಿದ್ದಿದೆ. ನಾನು ಈ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ ಅಂತಾ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್‍ವೈ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ಸಿಎಂ ಸಿದ್ದು ಹಾಗೂ ಸಚಿವರ ಮತ್ತಷ್ಟು ಆಪ್ತರ ಅಕ್ರಮಗಳು ಹೊರ ಬರಲಿವೆ. ನಮ್ಮ ಬಳಿಯೂ ಅಕ್ರಮದ ದಾಖಲೆಗಳಿದ್ದು, ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುವ ಮೂಲಕ ಕರ್ಮಕಾಂಡ ಬಯಲು ಮಾಡುತ್ತೇವೆ ಎಂದಿದ್ದಾರೆ. ಇನ್ನೂ ತಮ್ಮದೇ ಪಕ್ಷದ ಮಾಜಿ ಡಿಸಿಎಂ ಬಗ್ಗೆ ಮಾತನಾಡಿದ ಬಿಎಸ್‍ವೈ, ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಂಘಟನೆಗೆ ಹೋದ್ರೆ ಕ್ರಮಕೈಗೊಳ್ಳಲಾಗುವುದು.. ಈಗಾಗಲೇ ಹೈಕಮಾಂಡ್‍ಗೂ ಎಲ್ಲಾ ಮಾಹಿತಿ ಹೋಗಿದ್ದು, ಹೈಕಮಾಂಡ್ ಕೂಡ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಅದನ್ನ ಮೀರಿ ಚಟುವಟಿಕೆಯಲ್ಲಿ ತೊಡಗಿದ್ರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಅಂತಾ ಈಶ್ವರಪ್ಪಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *