ಸಲ್ಮಾನ್ ಖಾನ್ ಗಾಯದ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್!

0
4

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೊನೆಯ ಭಾಗವನ್ನು ಅಬು ದಾಬಿಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್‍ಗಳಿದ್ದು ಜನರಿಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಹಾಲಿವುಡ್‍ನ ಸಾಹಸ ನಿರ್ದೇಶಕ ಟಾಮ್ ಸ್ಟ್ಯೂಟರ್ಸ್ ಈ ಚಿತ್ರಕ್ಕೆ ಆಕ್ಷನ್ ಸೀನ್ ಗಳನ್ನು ಮಾಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಹಾಗೂ ಕತ್ರಿನಾ ಇಬ್ಬರೂ ಆಶ್ಚರ್ಯಪಡುವಂತೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಏಕ್ ಥಾ ಟೈಗರ್ ನಲ್ಲಿ ಈ ಹಾಟ್ ಜೋಡಿ ಜೊತೆಯಾಗಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದರು.

ಚಿತ್ರದ ಚಿತೀಕರಣ ಮಾಡುವಾಗ ಸಲ್ಮಾನ್ ಖಾನ್‍ನ ಗಾಯಗೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಆತಂಕಗೊಂಡಿದ್ದಾರೆ. ಸಲ್ಲುವಿಗೆ ನಿಜವಾಗಿ ಗಾಯಗೊಂಡಿದ್ದಾರಾ ಅಥವಾ ಸಿನಿಮಾದ ಒಂದು ಭಾಗ ಎನ್ನುವುದು ಸರಿಯಾದ ಮಾಹಿತಿ ತಿಳಿದು ಬಂದಿಲ್ಲ.

‘ಟೈಗರ್ ಜಿಂದಾ ಹೈ’ ಸಿನಿಮಾ 2012 ರ ಚಿತ್ರ ‘ಏಕ್ ಥಾ ಟೈಗರ್’ ಸಿಕ್ವೇಲ್ ಆಗಿದೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶಿಸಿದ್ದಾರೆ ಹಾಗೂ ‘ಏಕ್ ಥಾ ಟೈಗರ್’ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದರು.