‘ಸಾಹೋರೆ ಬಾಹುಬಲಿ’ ವೀಡಿಯೋ 1 ಗಂಟೆಯಲ್ಲಿ 1.40 ಲಕ್ಷ ಜನ ನೋಡಿದ್ರು!

0
14

ಬೆಂಗಳೂರು: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ ಎಂದು ತಿಳಿಯಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ – ದಿ ಕನ್‍ಕ್ಲೂಷನ್ ಚಿತ್ರದ ವೀಡಿಯೋ ಸಾಂಗ್ ಪ್ರೋಮೋ ರಿಲೀಸ್ ಆಗಿದ್ದು ಬಿಡುಗಡೆಯಾದ ಒಂದು ಗಂಟೆಯಲ್ಲೇ 1 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೋ ನೋಡಿದ್ದಾರೆ.

ಈ ವೀಡಿಯೋದಲ್ಲಿ ಪ್ರಭಾಸ್ ಆನೆಯ ಸೊಂಡಿಲಿನ ಮೂಲಕ ಬಾಣ ಹೂಡುವ ದೃಶ್ಯ, ಆನೆಗಳು ನಮಿಸುವ ದೃಶ್ಯ ಹಾಗೂ ಯುದ್ಧದ ದೃಶ್ಯಗಳಿವೆ.

ಲಹರಿ ಮ್ಯೂಸಿಕ್ ಸಂಸ್ಥೆ `ಸಾಹೋರೇ ಬಾಹುಬಲಿ’ ಹಾಡನ್ನು ಬಿಡುಗಡೆ ಮಾಡಿದ್ದು ಬಿಡುಗಡೆಯಾದ ಕೇವಲ 10 ನಿಮಿಷದಲ್ಲಿ ಹದಿನೈದು ಸಾವಿರ ಜನರು ಯೂಟ್ಯೂಬ್‍ನಲ್ಲಿ ಈ ವೀಡಿಯೋ ಸಾಂಗ್ ನೋಡಿದ್ದಾರೆ. ಬಾಹುಬಲಿ-2 ಚಿತ್ರ ಏಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಬಣ್ಣ ಹಚ್ಚಿದ್ದಾರೆ. ಎಂ.ಎಂ.ಕೀರವಾಣಿ, ದಲೇರ್ ಮೆಹಂದಿ, ಮೌನಿಮಾ ಚಿತ್ರದ ಹಾಡಿಗೆ ದನಿಗೂಡಿಸಿದ್ದಾರೆ.

 

LEAVE A REPLY

Please enter your comment!
Please enter your name here