ರಷ್ಯಾ ರಾಯಭಾರಿ ಹತ್ಯೆ

ರಷ್ಯಾ ರಾಯಭಾರಿ ಹತ್ಯೆ

ಸಿರಿಯಾದಲ್ಲಿ ಶಾಂತಿ ನೆಲೆಸಲು ರಷ್ಯಾ ನಡೆಸುತ್ತಿರುವ ಪ್ರಯತ್ನಕ್ಕೆ ಭಯೋತ್ಪಾದಕರು ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಪ್ರತಿಕಾರವಾಗಿ ರಷ್ಯಾ ರಾಯಭಾರಿಯನ್ನು ಅವರ ಅಂಗ ರಕ್ಷಕನೇ ಹತ್ಯೆ ಮಾಡಿದ್ದಾನೆ.

russian-ambassador-to-turkey-is-assassinated-in-ankara-nyusu

ಅಂಕಾರಕ್ಕೆ ರಷ್ಯಾ ರಾಯಭಾರಿಯಾಗಿರುವ ಆಂಡ್ರ್ಯೂ ಕರ್ಲೋವ್‌ ಅವರನ್ನು ಅಂಗರಕ್ಷಕನೇ ಹತ್ಯೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಅಂಕಾರದ ಕಲಾ ಗ್ಯಾಲರಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕರ್ಲೋವ್‌ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಂಗರಕ್ಷಕ ಗುಂಡು ಹಾರಿಸುತ್ತಿದ್ದಂತೆ ಅಲೆಪ್ಪೊ ಮರೆಯಬೇಡಿ ಸಿರಿಯಾ ಮರೆಯಬೇಡಿ ಎಂದು ಕೂಗಿಕೊಂಡಿದ್ದಾನೆ.ಹತ್ಯೆಯನ್ನು ಭಯೋತ್ಪಾದಕ ಕೃತ್ಯ ಎಂದು ರಷ್ಯಾ ಪರಿಗಣಿಸಿದೆ.ಈ ನಡುವೆ ದಾಳಿಕೋರನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.

 

Leave a Reply

Your email address will not be published. Required fields are marked *