ಹನಿಮೂನ್ ಹೋಗಿ ಲಿಪ್ ಲಾಕ್ ಫೋಟೋ ಅಪ್ಲೋಡ್ ಮಾಡಿದ ನಟಿ ರಿಯಾ ಸೇನ್!

0
5

ಮುಂಬೈ: ಬಾಲಿವುಡ್ ಹಾಟ್ ಆ್ಯಂಡ್ ಬೋಲ್ಡ್ ನಟಿ ರಿಯಾ ಸೇನ್ ಇತ್ತೀಚಿಗೆ ಮದುವೆಯಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಸದ್ಯ ಈ ನವಜೋಡಿ ಹನಿಮೂನ್ ಗಾಗಿ ಪೆರುಗ್ವೆಗೆ ತೆರಳಿದ್ದಾರೆ. ರಿಯಾ ತಮ್ಮ ಪತಿ ಶಿವಂ ತಿವಾರಿಯೊಂದಿಗಿನ ಲಿಪ್ ಲಾಕ್ ಮಾಡುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

`ಶ್ರೀಮತಿಗೆ ಕಿಸ್ ಮಾಡುವುದು ಒಂದು ಹೃದಯವಂತಿಕೆ ಕಲೆ’ ಎಂಬ ಅರ್ಥದಲ್ಲಿ ಫೋಟೋ ಜೊತೆಗೆ ಒಂದು ಸಾಲನ್ನು ಸಹ ಬರೆದುಕೊಂಡಿದ್ದಾರೆ. ಸದ್ಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ರಿಯಾ ಅಭಿಮಾನಿಗಳು ಫನ್ನಿ ಫನ್ನಿ ಕಮೆಂಟ್ ನೀಡಿದ್ದಾರೆ.

#kisses for #mrs and a #heart for #art ☮️

A post shared by Riya Sen (@riyasendv) on

ರಿಯಾ ಮತ್ತು ಶಿವಂ ಹನಿಮೂನ್ ಗಾಗಿ ಪೆರುಗ್ವೆಗೆ ತೆರಳಿದ್ದು, ಬೀದಿಯ ಬದಿ ಬಳಿಕ ಕೆಫೆಯೊಂದರಲ್ಲಿ ಇಬ್ಬರೂ ಕಿಸ್ ಮಾಡಿದ್ದಾರೆ. ಈ ಫೋಟೋ ಮೂಲಕ ಮತ್ತೊಮ್ಮೆ ತಾನೆಷ್ಟು ಬೋಲ್ಡ್ ಎಂಬುದನ್ನು ರಿಯಾ ತೋರಿಸಿಕೊಟ್ಟಿದ್ದಾರೆ.

🕊 #theartofjoy

A post shared by Riya Sen (@riyasendv) on

ರಿಯಾ ಬೆಂಗಾಲಿ ಶೈಲಿಯಲ್ಲಿ ಮದುವೆಯಾಗುವ ಮೂಲಕ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ರಿಯಾ ಬಾಲಿವುಡ್‍ನ ಹಿರಿಯ ನಟಿ ಮೂನ್ ಮೂನ್ ಸೇನ್ ಅವರ ಮಗಳಾಗಿದ್ದು, ಸುಚಿತ್ರಾ ಸೇನ್ ಅವರ ಪ್ರೀತಿಯ ಮೊಮ್ಮಗಳಾಗಿದ್ದಾರೆ.