ಸಾಫ್ಟ್ ವೇರ್ ಜೊತೆ ಸಪ್ತಪದಿ ತುಳಿಯಲಿರುವ ನಿರ್ದೇಶಕ ರಿಶಬ್ ಶೆಟ್ಟಿ

ಸಾಫ್ಟ್ ವೇರ್ ಜೊತೆ ಸಪ್ತಪದಿ ತುಳಿಯಲಿರುವ ನಿರ್ದೇಶಕ ರಿಶಬ್ ಶೆಟ್ಟಿ

ರಿಕ್ಕಿ ಸಿನಿಮಾದಲ್ಲಿ ಪರಿಶುದ್ಧವಾದ ಪ್ರೀತಿಯನ್ನು ತೋರಿದ ನಿರ್ದೇಶಕ ರಿಶಬ್ ಶೆಟ್ಟಿ ಪ್ರೀತಿ ಗೀತಿ ಏನೂ ಬೇಡ  ಎಂದು ನಿಜ ಜೀವನದಲ್ಲಿ ಮನೆಯವರು ನೋಡಿದ ಹುಡುಗಿಗೆ ಮಣೆ ಹಾಕಿದ್ದಾರೆ. ಚೊಚ್ಚಲ ಸಿನಿಮಾ ರಿಕ್ಕಿಯಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ರಿಶಬ್ ಶೆಟ್ಟಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.ಅದಕ್ಕಿಂತ ಮುಂಚೆ ಕಿರಿಕ್ ಪಾರ್ಟಿಯನ್ನು  ಅವರು ಮುಂದಾಗಿದ್ದಾರೆ. ಹಾಗಾದ್ರೆ ರಿಶಬ್ ಅವರ ಕೈ ಹಿಡಿಯುವ ಹುಡುಗಿ ಯಾರು. ಚಿತ್ರರಂಗದವರಂತೂ ಖಂಡಿತಾ ಅಲ್ಲ.

 

ತೆರೆಯ ಮೇಲೆ ಪೀತಿ ಪ್ರೇಮದ ಪಾಠ ಹೇಳಿದ ನಿರ್ದೇಶಕ ರಿಶಬ್ ಶೆಟ್ಟಿ ಆರೇಂಜ್ ಮದುವೆ ಆಗಲು ಸಿದ್ದರಾಗಿದ್ದಾರೆ.

21-1477032974-6-rishab

ರಿಶಬ್ ಶೆಟ್ಟಿ ಕೈ ಹಿಡಿಯುತ್ತಿರುವ ಹುಡುಗಿ ಪ್ರಗತಿ ಶೆಟ್ಟಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಬೆಂಗಳೂರಿನ ಐಬಿಎಮ್ ಸಂಸ್ಥೆಯಲ್ಲಿ ಪ್ರಗತಿ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ತಾಯಿಯ ಒತ್ತಾಯಕ್ಕೆ ಮಣಿದು ಹಸೆಮಣಿ ಏರಲು ರಿಶಬ್ ಒಪ್ಪಿಕೊಂಡಿದ್ದಾರೆ. ಉಳಿದವರು ಕಂಡಂತೆ  ಚಿತ್ರದಲ್ಲಿ ನಟಿಸಿ,’ರಿಕ್ಕಿ’ ಚಿತ್ರ ನಿರ್ದೇಶನ ಮಾಡಿದ್ದ ರಿಶಬ್ ಶೆಟ್ಟಿ ಇದೀಗ ಕಿರಿಕ್ ಪಾರ್ಟಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ರಿಶಬ್ ಮತ್ತು ಪ್ರಗತಿ ಮನೆಯಲ್ಲಿ ಮದುವೆ ಬಗ್ಗೆ ಮಾತುಕತೆ ಮುಗಿದಿದ್ದು ಮುಂದಿನ ಫೆಬ್ರವರಿಯಲ್ಲಿ ಕುಂದಾಪುರದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ.

21-1477032927-5-rishab

ಉಡುಪಿ ಜಿಲ್ಲೆಯ ಮಂದಾರ್ಥಿಯವರಾಗಿರುವ ಪ್ರಗತಿ ಶೆಟ್ಟಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಗತಿ ತಮ್ಮ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

21-1477032854-3-rishab

Leave a Reply

Your email address will not be published. Required fields are marked *