ಗ್ರಾಹಕರಿಗೆ ಆಫರ್, ಪ್ರತಿಸ್ಪರ್ಧಿಗಳಿಗೆ ಶಾಕ್ ಕೊಟ್ಟ ಜಿಯೋ!

0
6

ಮುಂಬೈ: ಸ್ಮಾರ್ಟ್ ಫೋನ್ ಬಳಸೋ ಯಾರನ್ನು ಕೇಳಿದರೂ ಈಗ ಕೇಳೋ ಮಾತು ಜಿಯೋ, ಜಿಯೋ… ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಸ್ಪರ್ಧಿಗಳನ್ನು ಡಾಟಾ ದರ ಕಡಿತದ ಮೂಲಕ ಬೆಚ್ಚಿ ಬೀಳಿಸಿದ ಜಿಯೋ ಈಗ ಅಂತಾರಾಷ್ಟ್ರೀಯ ಕರೆಗಳಲ್ಲೂ ದರ ಸಮರವನ್ನು ಆರಂಭಿಸಿದೆ. ಈ ಮೂಲಕ ಸಿಕ್ಕ ಯಾವುದೇ ಅವಕಾಶವನ್ನೂ ಯಾರಿಗೂ ಬಿಟ್ಟು ಕೊಡದಿರಲು ನಿರ್ಧರಿಸಿದೆ.

ನೂತನ ಪ್ಲ್ಯಾನ್ ಪ್ರಕಾರ ಇಂಟರ್‍ನ್ಯಾಷನಲ್ ಕಾಲ್‍ಗಳಿಗೆ 1 ನಿಮಿಷಕ್ಕೆ ಕೇವಲ 3 ರೂ. ಶುಲ್ಕ ವಿಧಿಸುವುದಾಗಿ ಜಿಯೋ ಹೇಳಿದೆ. ಈ ಪ್ಲಾನ್ ಜಿಯೋ ಗ್ರಾಹಕರಿಗೆ ಸಿಗಬೇಕಾದರೆ 501 ರೂ.ಗಳ ರಿಚಾರ್ಜ್ ಮಾಡಬೇಕಾಗುತ್ತದೆ.

ಯಾವ ದೇಶಗಳಿಗೆ ಎಷ್ಟು ರೂ.?: ಅಮೆರಿಕ, ಇಂಗ್ಲೆಂಡ್, ಹಾಂಕಾಂಗ್, ಸಿಂಗಾಪುರ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಇಟಲಿ, ಲಕ್ಸಂಬರ್ಗ್, ಪೋಲಂಡ್, ಪೋರ್ಚುಗಲ್, ಸ್ವೀಡನ್, ತೈವಾನ್‍ಗಳಿಗೆ 3 ರೂ.ನಲ್ಲಿ ಕರೆ ಮಾಡಬಹುದು. ಫ್ರಾನ್ಸ್, ಪಾಕಿಸ್ತಾನ, ಇಸ್ರೇಲ್, ಜಪಾನ್, ಡೆನ್ಮಾರ್ಕ್, ದಕ್ಷಿಣ ಕೊರಿಯಾಗಳಿಗೆ ಪ್ರತಿ ನಿಮಿಷಕ್ಕೆ 4.80 ರೂ. ದರದಲ್ಲಿ ಕರೆ ಮಾಡಬಹುದು.

ಈಗಾಗಲೇ ಉಚಿತ ಕರೆಯನ್ನು ನೀಡಿ ಡೇಟಾಗೆ ಮಾತ್ರ ಶುಲ್ಕ ವಿಧಿಸಿರುವುದು ಟೆಲಿಕಾಂ ಕಂಪೆನಿಗಳ ಆದಾಯಕ್ಕೆ ಕುತ್ತು ಬಂದಿದೆ. ಈಗ ಐಎಸ್‍ಡಿ ಕರೆಯಲ್ಲೂ ದರ ಸಮರ ಆರಂಭಿಸಿದ್ದು ಉಳಿದ ಟೆಲಿಕಾಂ ಕಂಪೆನಿಗಳ ಆದಾಯದ ಮೇಲೆ ಪರಿಣಾಮ ಬೀರಲಿದೆ.

ಟ್ರಾಯ್‍ಗೆ ಸಲ್ಲಿಕೆ: ಹೊಸ ಧನ್ ಧನಾ ಧನ್ ಟ್ಯಾರಿಫ್ ಪ್ಲಾನ್‍ನ ಸಂಪೂರ್ಣ ಮಾಹಿತಿಯನ್ನು ಜಿಯೋ ಟ್ರಾಯ್‍ಗೆ ಸಲ್ಲಿಸಿದೆ. ಸೋಮವಾರ ಜಿಯೋ ಧನ್ ಧನಾ ಧನ್ ಪ್ಲಾನ್‍ಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಸೋಮವಾರ ಮಧ್ಯಾಹ್ನ ಸಲ್ಲಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಸಮ್ಮರ್ ಸರಪ್ರೈಸ್ ಆಫರಿಗೆ ಸಂಬಂಧಿಸಿದ ಮಾಹಿತಿಯನ್ನು ಜಿಯೋ ಟ್ರಾಯ್‍ಗೆ ಸಲ್ಲಿಸದೇ ಇದ್ದ ಕಾರಣ ಈ ಪ್ಲಾನನ್ನು ವಾಪಸ್ ಪಡೆದುಕೊಂಡಿತ್ತು. ಇದಾದ ಬಳಿಕ ಜಿಯೋ ಧನ್ ಧನಾ ಧನ್ ಆಫರನ್ನು ಗ್ರಾಹಕರಿಗೆ ಪರಿಚಯಿಸಿತ್ತು.

LEAVE A REPLY

Please enter your comment!
Please enter your name here