ಕಿರಿಕ್ ಫ್ರೆಂಡ್ ಜೊತೆ ಹಾಟ್ ಕ್ವೀನ್

ಒಂದಲ್ಲ ಒಂದು ವಿವಾದ,ಇಲ್ಲವಾದ್ರೆ ತಮ್ಮ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ರಾಗಿಣಿ ಇದೀಗ ಬಾಯ್ ಫ್ರೆಂಡ್ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಒಂದು ಕಾಲದ ಕಿರಿಕ್ ಫ್ರೆಂಡ್ ಜೊತೆ ಹಾಟ್ ಕ್ವೀನ್  ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿದ್ದಾರೆ ಅನ್ನುವ ಸುದ್ದಿ ಬರುತ್ತಿದೆ. ಮದುವೆಯೂ ಆಗ್ತಾರಂತೆ. ಯಾವುದಕ್ಕೂ ರಾಗಿಣಿ ರಿಯಾಕ್ಷನ್  ಕೊಟ್ಟಿಲ್ಲ.

ನಾಟಿಕೋಳಿ ಚಿತ್ರದ ವಿವಾದ ಪ್ರಾರಂಭವಾದ ಸಂದರ್ಭದಲ್ಲಿ ಇದೇ ಶಿವಪ್ರಕಾಶ್ ಮೇಲೆ ರಾಗಿಣಿ ಎಗರಾಡಿದ್ದರು. ಶಿವಪ್ರಕಾಶ್ ಯಾರು ಗೊತ್ತೆ ಇಲ್ಲ ಅಂದಿದ್ದರು. ಆದ್ರೆ ಇದೀಗ ಇಬ್ಬರು ಜೊತೆಯಾಗಿದ್ದಾರೆ ಅನ್ನುವ ಸುದ್ದಿ ಬರುತ್ತಿದೆ. ಜೊತೆಯಾಗಿದ್ದಾರೆ ಅನ್ನುವುದಕ್ಕೆ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಓಡಾಡುತ್ತಿದೆ. ನಾನೇ ಸಿಎಂ ಚಿತ್ರದ ಸಲುವಾಗಿ ಗಿಮಿಕ್ ಇದು ಅನ್ನುವ ಮಾತುಗಳು ಒಂದು ಕಡೆಯಾದ್ರೆ ಇಬ್ಬರು ಮದುವೆಯಾಗ್ತಾರಂತೆ ಎಂದು ಪಿಸುಗುಟ್ಟುತ್ತಿದೆ ಗಾಂಧಿನಗರ. ಸತ್ಯವೋ, ಸುಳ್ಳೋ ಗೊತ್ತಿಲ್ಲ ರಾಗಿಣಿಯವರೇ ಹೇಳಬೇಕು.ಶಿವಪ್ರಕಾಶ್, ರಾಗಿಣಿ ಜೊತೆಯಾಗಿರುವ ಫೋಟೋಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಹೇಗಿದ್ರು ಇದು ಚಂದನವನದ ಮದುವೆ ಸೀಸನ್ . ಮತ್ತೊಂದು ಜೋಡಿ ಮದುವೆಗೆ ಸಿದ್ದವಾಗಿದೆಯೇ ಅನ್ನುವುದನ್ನು ರಾಗಿಣಿಯವರೇ ಹೇಳಬೇಕು.

 

Leave a Reply

Your email address will not be published. Required fields are marked *