ಗಂಡು ಮಗುವಿನ ತಂದೆಯಾದ್ರು ನಟ ಪವನ್ ಕಲ್ಯಾಣ್

0
8

ಹೈದರಾಬಾದ್: ಟಾಲಿವುಡ್ ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಇಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ. ನಟಿ ರೇಣು ದೇಸಾಯಿಗೆ ವಿಚ್ಛೇದನ ನೀಡಿದ ಬಳಿಕ ನಟ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ವರಿಸಿದ್ದರು. ಕಳೆದ 2011ರಲ್ಲಿ ತೀನ್ ಮಾರ್ ಎಂಬ ಚಿತ್ರದ ಶೂಟಿಂಗ್ ವೇಳೆ ಪವನ್ ಅವರು ಅನ್ನಾರನ್ನು ಭೇಟಿಯಾಗಿದ್ದರು. ಆ ಬಳಿಕ ಇಬ್ಬರು ಡೇಟಿಂಗ್ ಮಾಡಿದ್ದು, ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯೂ ಆದ್ರು. ಈಗಾಗಲೇ ದಂಪತಿಗೆ ಪೊಲೆನಾ ಎಂಬ ಹೆಸರಿನ ಹೆಣ್ಣು ಮಗುವಿದೆ. ಇದೀಗ ಮತ್ತೆ ಗಂಡು ಮಗುವಿಗೆ ಅನ್ನಾ ಜನ್ಮ ನಿಡಿದ್ದು, ಎರಡೂ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ.

ಚಿತ್ರವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೂ ಪವನ್ ಹೈದರಾಬಾದ್ ಗೆ ಬಂದು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ. ಸದ್ಯ ತಾಯಿ- ಮಗು ಆರೋಗ್ಯವಾಗಿದ್ದಾರೆ.


ಸಂಕ್ರಾತಿಗೆ ಪವನ್ ಕಲ್ಯಾಣ್ 25ನೇ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ತಾಯಿ-ಮಗುವಿನ ಜೊತೆ ಪವನ್ ಕಲ್ಯಾಣ್ ತನ್ನ ಜೊತೆ ತನ್ನ ಅಮೂಲ್ಯ ಕ್ಷಣಗಳನ್ನು ಕಳೆಯಲಿದ್ದಾರೆ. ಪವನ್ ಈ ಮೊದಲು ಮದುವೆಯಾದ ರೇಣು ದೇಸಾಯಿಗೆ ಇಬ್ಬರು ಮಕ್ಕಳಿದ್ದು, ಮಗ ಅಕಿರ ಹಾಗೂ ಮಗಳು ಸದ್ಯ ಇದೀಗ ತಾಯಿಯ ಜೊತೆಗಿದ್ದಾರೆ.

LEAVE A REPLY

Please enter your comment!
Please enter your name here