ಬಿಲ್ ಹೆಚ್ಚಾಯ್ತು ಎಂದು ಡಾಕ್ಟರ್ ಮೇಲೆ ಚಾಕು ಇರಿದ ವೃದ್ಧ ರೋಗಿ!

0
6

ಬೆಳಗಾವಿ: ವೈದ್ಯರ ಮೇಲೆ ವೃದ್ಧ ರೋಗಿಯೊಬ್ಬರು ಚಾಕುವಿನಿಂದ ಹಲ್ಲೆ ಮಾಡಿರೋ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪುಣೆಯ ಸಿಂಹಘಡ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿಗೆ ಬಿಲ್ ಯಾಕೆ ಮಾಡಿದ್ದೀರಿ ಎಂದು ಆಕ್ರೋಶಗೊಂಡ 75 ವರ್ಷದ ರೋಗಿ ಡಾಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಡಾ. ಸಂತೋಚ್ ಆವಾರಿ ಆ ರೋಗಿಯ ಬಳಿ ರೊಟೀನ್ ಚೆಕಪ್‍ಗೆ ಹೋದ ಸಂದರ್ಭದಲ್ಲಿ ಮಲಗಿದ ಜಾಗದಿಂದಲೇ ವೈದ್ಯರ ಮೇಲೆ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ರೋಗಿ ತನ್ನ ತಲೆದಿಂಬಿನ ಬಳಿ ಇದ್ದ ಚಾಕು ತೆಗೆದುಕೊಂಡು ವೈದ್ಯರಿಗೆ ಇರಿಯೋ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ರೋಗಿ ಆಯತಪ್ಪಿ ಹಾಸಿಗೆಯಿಂದ ಕೆಳಗೆ ಬಿದ್ದಿದ್ದು, ಕೂಡಲೇ ಸ್ಥಳದಲ್ಲಿದ್ದವರು ಓಡಿಬಂದು ಅವರನ್ನು ಹಿಡಿದುಕೊಂಡಿದ್ದಾರೆ. ಘಟನೆಯಲ್ಲಿ ಡಾಕ್ಟರ್ ಸಂತೋಷ್ ಅವರ ಹೊಟ್ಟೆ ಮತ್ತು ಕೈಗೆ ಗಂಭೀರ ಗಾಯವಾಗಿದೆ.