40 ವರ್ಷ ಹಳೆಯ ವ್ಯವಹಾರಕ್ಕೂ ಐಟಿ ಕಣ್ಣು

40 ವರ್ಷ ಹಳೆಯ ವ್ಯವಹಾರಕ್ಕೂ ಐಟಿ ಕಣ್ಣು

ನೋಟ್ ಬ್ಯಾನ್ ನಂತ್ರ ಕಪ್ಪು ಕುಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಸೇರಿ ಹಲವು ಇಲಾಖೆಗಳು ಭರ್ಜರಿ ಕಾರ್ಯಾಚರಣೆ ನಡೆಸಿತು. ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಕೆದಕಿತು. ಇಲ್ಲಿಗೆ ಇದು ನಿಂತು ಹೋಯ್ತು ಅಂದುಕೊಂಡ್ರೆ ಖಂಡಿತಾ ಸುಳ್ಳು. ಇದೀಗ ಆರು ವರ್ಷಗಳ ಹಿಂದಿನ ಬ್ಯಾಂಕ್ ವ್ಯವಹಾರಕ್ಕೆ ಕೈ ಹಾಕಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಆದ್ರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.  ಹೀಗಾಗಿ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಪ್ಪು ಕುಳಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ,ಮತ್ತಷ್ಟು ಕಾಳಧನವನ್ನು ಹೊರ ತೆಗೆಯಲು ಆರು ವರ್ಷಗಳ ಹಿಂದಿನ ಬ್ಯಾಂಕ್‌ ವ್ಯವಹಾರಗಳನ್ನೂ ಪರಿಶೀಲಿಸಲು ಮುಂದಾಗಿದೆ. ಈ ಕ್ರಮದಿಂದ ನೋಟ್ ಬ್ಯಾನ್ ಸಂದರ್ಭದಲ್ಲಿ ಕಳ್ಳ ದಾರಿ ಬಳಸಿ ಕಪ್ಪು ಹಣವನ್ನು ಸಕ್ರಮ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿವರು ಈಗ ಉಸಿರುಗಟ್ಟಿದಂತೆ ಆಡುತ್ತಿದ್ದಾರೆ.ಹಳೆಯ ಹಣಕಾಸು ವ್ಯವಹಾರಗಳನ್ನೂ ಪರಿಶೀಲಿಸಲು ಈಗಿರುವ ಆದಾಯ ತೆರಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಹೀಗಾಗಿ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಫೆಬ್ರವರಿ ವೇಳೆ ಈ ಆದೇಶ ಹೊರ ಬೀಳಲಿದೆ. ಈ ಕಾನೂನು ತಿದ್ದುಪಡಿಯಿಂದ  ಹಲವು ದಶಕಗಳ ಹಿಂದಿನ ಕಪ್ಪು ಹಣ ವ್ಯವಹಾರಕ್ಕೂ ಆದಾಯ ತೆರಿಗೆ ಕಣ್ಣು ಹಾಕಲಿದೆ. ಒಂದು ವೇಳೆ ದಶಕಗಳ ಹಿಂದಿನ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾದ್ರೆ ಈಗಿನ ಮೌಲ್ಯದ ಆಧಾರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಈ ಕ್ರಮದ ಸುದ್ದಿ ಕೇಳಿದ ಮಾಜಿ ಕಾಳಧನಿಕರು ಹೋದೆಯ ಪಿಶಾಚಿ ಅಂದ್ರೆ ಬಂದೆಯ ಗವಾಕ್ಷಿ ಅನ್ನುತ್ತಿದ್ದಾರೆ.

Leave a Reply

Your email address will not be published. Required fields are marked *