ಭರ್ಜರಿ ಪ್ರದರ್ಶನ ಕಾಣುತ್ತಿರುವ ನಾಗರಹಾವು

ಭರ್ಜರಿ ಪ್ರದರ್ಶನ ಕಾಣುತ್ತಿರುವ ನಾಗರಹಾವು

ವಿಷ್ಣುದಾದ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ನಾಗರಹಾವು ರಿಲೀಸ್‍ಗೆ ಸಾಕ್ಷಿಯಾತ್ತು ಅಪಾರ ಜನಸ್ಥೋಮ. ಬನ್ನಿ ಹಗಾದ್ರೆ ಸಾಹಸಸಿಂಹ ಅಭಿನಯದ 201ನೇ ಚಿತ್ರದ ಸಂಭ್ರಮ ಹೇಗಿತ್ತು? ಫಸ್ಟ್ ಡೇ ಫಸ್ಟ್ ಶೋ ಹೈಲೈಟ್ಸ್ ಏನು? ಸಿನಿಮಾ ನೋಡಿದವರ ರೆಸ್ಫಾನ್ಸ್ ಏನು ಅನ್ನೋ ಕಂಪ್ಲೀಟ್ ಡಿಟೈಲ್ಸ್ ನಿಮಗಾಗಿ.

ಸ್ಯಾಂಡಲ್‍ವುಡ್ ಸಿನಿರಸಿಕರ ಕುತೂಹಲದ ಗಡಿ ದಾಟಿಸಿದ್ದ ನಾಗರಹಾವು ಸಿನಿಮಾ ಇಂದು ದೇಶಾದ್ಯಂತ ತೆರೆಕಂಡಿತು. ರಾಜ್ಯದಲ್ಲೂ ನಾಗರಹಾವು ಚಿತ್ರ ಭರ್ಜರಿ ಓಪನಿಂಗ್ ಪಡಿತು.

ಅಭಿಮಾನಿಗಳ ಆರಾಧ್ಯ ದೈವ ವಿಷ್ಣುವರ್ಧನ್ ಅವ್ರ ಕಟೌಟ್‍ಗೆ ದೊಡ.. ದೊಡ ಹೂವಿನ ಹಾರಗಳನ್ನ ಹಾಕೋ ಮೂಲಕ ಸಂಭ್ರಮಕ್ಕೆ ಚಾಲನೇ ಕೊಟ್ರು ಸಿನಿರಸಿಕರು. ಅಷ್ಟೇ ಅಲ್ಲದೇ ದಾದ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಫುಲ್ ಖುಷಿ ಪಟ್ರು ವಿಷ್ಣುವರ್ಧನ್ ಅಭಿಮಾನಿಗಳು. ಸಿನಿಮಾ ನೋಡಿ ಥಿಯೇಟರ್‍ನಿಂದ ಹೊರಬಂದ ಸಿನಿರಸಿಕರು ಚಿತ್ರದ ಬಗ್ಗೆ ಮಾತನಾಡಿದ್ದು ಹೀಗೆ.

ಇನ್ನು ಸಿನಿಮಾದಲ್ಲಿ ವಿಷ್ಣುವರ್ಧನ್ ಎಂಟ್ರಿಗೆ ಅಭಿಮಾನಿಗಳ ಚಪ್ಪಾಳೆ-ಶಿಳ್ಳೆಗಳ ಸುರಿಮಳೆ ಆಯ್ತು. ಈ ದೃಶ್ಯಗಳನ್ನ ನೋಡಿದ ಹಲವರಿಗೆ ದಾದ ಇಲ್ಲೇ ಎಲ್ಲೋ ಇದ್ದಾರೆ ಅವ್ರು ಈ ಸಂಭ್ರಮಾನ ನೊಡ್ತಿದ್ದಾರೆ ಅಂತ ಫಿಲ್ ಆಗಿ ಮೂಕವಿಸ್ಮಮಿತರಾದ್ರು. ಒಟ್ಟಾರೆ ದಾದ ಮತ್ತೆ ಸ್ಯಾಂಡಲ್‍ವುಡ್ ಸಿಲ್ವರ್‍ಸ್ಕ್ರೀನ್‍ಗೆ ಎಂಟ್ರಿ ಕೊಟ್ಟಿದ್ದು ದಸರಾ-ದೀಪಾವಳಿ ಆಚರಿಸಿದ ಸಂಭ್ರಮ ಅವ್ರ ಅಭಿಮಾನಿಗಳದು.

 

Leave a Reply

Your email address will not be published. Required fields are marked *