ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಪಿಟೀಲು ವಾದಕರಂತೆ – ಮೈಸೂರು ದಸರಾ ಉಪಸಮಿತಿ ಎಡವಟ್ಟು!

0
8

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2017ರ ಅಧಿಕೃತ ಆಮಂತ್ರಣ ಪತ್ರದಲ್ಲಿ ಎಡವಟ್ಟಾಗಿದ್ದು, ಕೊಳಲು ವಾದಕರಾಗಿ ವಿಶ್ವ ಪ್ರಸಿದ್ಧಿ ಪಡೆದಿರುವ ಪ್ರವೀಣ್ ಗೋಡ್ಖಿಂಡಿ ಅವರನ್ನು ಪಿಟೀಲುವಾದಕ ಎಂದು ಉಲ್ಲೇಖಿಸಲಾಗಿದೆ.

ಸೆ.28 ರಂದು ಜಯತೀರ್ಥ ಮೇವುಂಡಿ ಹಾಗೂ ಪ್ರವೀಣ್ ಗೋಡ್ಖಿಂಡಿಯ ಜುಗಲ್‍ ಬಂದಿ ಕಾರ್ಯಕ್ರಮ ನಡೆಯಲಿದೆ. ಆದರೆ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಗೋಡ್ಖಿಂಡಿಯವರನ್ನ ಪಿಟೀಲು ವಾದಕ ಎಂದು ಉಲ್ಲೇಖಿಸಲಾಗಿದೆ. ಈ ತಪ್ಪು ಮುದ್ರಣದಿಂದಾಗಿ ದಸರಾ ಉಪ ಸಮಿತಿ ಮುಜುಗರಕ್ಕೀಡಾಗಿದೆ.

ಈ ಬಗ್ಗೆ ವಾಟ್ಸಾಪ್ ಗಳಲ್ಲಿಯೂ ಚರ್ಚೆ ಆರಂಭವಾಗಿದೆ. ಗ್ರೂಪ್ ಒಂದರಲ್ಲಿ ಗೋಡ್ಖಿಂಡಿ ಅವರು `ನಾನು ಪಿಟೀಲು ನುಡಿಸೋದು ನನಗೆ ಗೊತ್ತಿಲ್ವಲ್ಲ’ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಪ್ರಕಟವಾದ ಬಳಿಕ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಹೊತ್ತ ಅಧಿಕಾರಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.