ಮೇಟಿ ವಿಚಾರದಲ್ಲಿ ಪರಮೇಶ್ವರ್ ಮೌನದ ರಹಸ್ಯ

ಮೇಟಿ ವಿಚಾರದಲ್ಲಿ ಪರಮೇಶ್ವರ್ ಮೌನದ ರಹಸ್ಯ

ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯೇ.ಅಯ್ಯೋ ಅದು ಹಳೆ ಸುದ್ದಿ ಅನ್ನುತ್ತೀರಿ ನೀವು. ಆದ್ರೆ ವೇದಿಕೆಗಳಲ್ಲಿ ರಾಮ ಲಕ್ಷಣರಂತೆ ಪೋಸು ಕೊಡುವುದನ್ನ ಇವರಿಬ್ಬರು ಮರೆಯುವುದಿಲ್ಲ. ಆದ್ರೆ ಮೇಟಿ ವಿಷಯದಲ್ಲಿ ಸಿದ್ದರಾಮಯ್ಯ ಅವರನ್ನು ಹಳ್ಳಕ್ಕೆ ದೂಡಿದ್ದು ಪರಮೇಶ್ವರ್. ಸಿಡಿ ಬರಲಿ ಆಮೇಲೆ ಕ್ರಮ ಎಂದು ಪರಮೇಶ್ವರ್ ಹೇಳಿರುವುದೇ ಎಲ್ಲಾ ಎಡವಟ್ಟುಗಳಿಗೆ ಕಾರಣ.

ಪರಮೇಶ್ವರ್ ಮೇಟಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ರೆ ಸರ್ಕಾರಕ್ಕೆ, ಪಕ್ಷಕ್ಕೆ ಆಗುತ್ತಿದ್ದ ಮುಜುಗರದಿಂದ ತಪ್ಪಿಸಿಕೊಳ್ಳಬಹುದಿತ್ತು. ಆದ್ರೆ ಸಿದ್ದರಾಮಯ್ಯ ಅವರ ಇಮೇಜ್ ನಲ್ಲಿರುವ ಬ್ರೈಟ್ ನೆಸ್ ಅನ್ನು ಸ್ವಲ್ಪವಾದ್ರು ಕಡಿಮೆ ಮಾಡಬೇಕಿತ್ತಲ್ಲ. ಹೇಳುವುದಕ್ಕೆ ಗೃಹ ಸಚಿವ, ಆದ್ರೆ ಸಲಹೆಗಾರ ಕೆಂಪಯ್ಯ ಸಿದ್ದರಾಮಯ್ಯ ಆಪ್ತ, ಗುಪ್ತಚರ ಇಲಾಖೆ ಗೃಹ ಇಲಾಖೆಯಡಿಗೆ ಬರುವುದೇ ಇಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಿದ್ದರಾಮಯ್ಯ ನೇರವಾಗಿ ಕರೆಸಿಕೊಳ್ಳುತ್ತಾರೆ. ಕನಿಷ್ಠ ಪಕ್ಷ ಸೌಜನ್ಯಕ್ಕಾದ್ರು ಹಿರಿಯ ಅಧಿಕಾರಿಗಳ ಸಭೆ ನಡೆಸುವ ಸಂದರ್ಭದಲ್ಲಿ ಕರೆಯುವುದಿಲ್ಲ ಅನ್ನುವ ಕೊರಗು ಪರಮೇಶ್ವರ್ ಅವರಿಗಿದೆ. ಕೆಲ ಪ್ರಕರಣಗಳನ್ನು ಸಿಐಡಿ, ಎಸಿಬಿಗೆ ವಹಿಸಿರುವುದನ್ನು ಸಿದ್ದರಾಮಯ್ಯ ಅವರೇ ಘೋಷಿಸುತ್ತಾರೆ. ಗೃಹ ಸಚಿವರಾದವರಿಗೆ ಉರಿ ಹತ್ತುವುದರಲ್ಲಿ ಎರಡು ಮಾತಿಲ್ಲ.ಹೀಗಾಗಿ ಮೇಟಿ ಪ್ರಕರಣದಲ್ಲೂ ಪರಮೇಶ್ವಕ್ಕೆ ಮೌನ ಶರಣಾದ್ರು, ಮಾತನಾಡುವ ಪರಿಸ್ಥಿತಿ ಬಂದ್ರೆ ಹಾರಿಸಿ, ತೇಲಿಸಿ ಮಾತು ಬಿಟ್ರು.ಮೇಟಿ ಪ್ರಕರಣದ ಸತ್ಯವನ್ನು ತಿಳಿಯುವ ತಾಕತ್ತು ಪರಮೇಶ್ವರ್ ಅವರಿಗಿತ್ತು. ಸಿಡಿ ಬರೋ ತನಕ ಕಾಯಲೇಬೇಕಿರಲಿಲ್ಲ. ರಾಜಶೇಖರ್ ಮನೆ ತನಕ ಬಂದ್ರು ಭೇಟಿ ಮಾಡಲೇ ಇಲ್ಲ. ಸಿದ್ದರಾಮಯ್ಯ ಸಂಪುಟ, ಅವರ ನಿಕಟವರ್ತಿ, ನಾನ್ಯಾಕೆ ತಲೆ ಕೆಡಿಸಿ ಮೆದುಳು ಗೊಬ್ಬರ ಮಾಡಿಕೊಳ್ಳಲಿ ಎಂದು ಸುಮ್ಮನಾದ್ರು. ಪರಮೇಶ್ವರ್ ಅವರ ವಿಶ್ವಾಸವನ್ನು ಸಿದ್ದರಾಮಯ್ಯ ಗಳಿಸಿಕೊಂಡಿದ್ರೆ ಮೇಟಿ ಇವತ್ತು ಕಾಂಗ್ರೆಸ್ ಗೆ ಮೀಟುತ್ತಿರಲಿಲ್ಲ.

Leave a Reply

Your email address will not be published. Required fields are marked *