ಚಿನ್ನಕ್ಕೆ ಗುನ್ನ – ಬಂಗಾರದಂತ ಸರ್ಜಿಕಲ್ ಸ್ಟ್ಕೈಕ್

ಚಿನ್ನಕ್ಕೆ ಗುನ್ನ – ಬಂಗಾರದಂತ ಸರ್ಜಿಕಲ್ ಸ್ಟ್ಕೈಕ್

ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಆಯ್ತು. ಕಪ್ಪು ಹಣಕ್ಕೂ ಸರ್ಜಿಕಲ್ ಸ್ಟ್ರೈಕ್ ಬಂತು. ಈಗ ಚಿನ್ನದ ಸರದಿ.ಕೆ.ಜಿ.ಗಟ್ಟಲೆ ಚಿನ್ನ ಕೂಡಿಟ್ಟವರ ಮೇಲೆ ಇದೀಗ ಮೋದಿ ಕಣ್ಣು ಬಿದ್ದಿದೆ. ಹಾಗಂತ ಸರ್ವಾಧಿಕಾರಿಯಂತೆ ಚಿನ್ನ ಕಸಿಯುವುದಿಲ್ಲ ಬಿಡಿ. ಅದಕ್ಕೆ  ಕಾನೂನು ಕ್ರಮಗಳಿವೆ. ಚಿನ್ನದ ವಿಷಯದಲ್ಲಿ ಹೊರ ಬಿದ್ದಿರುವ ಕಾನೂನು ಹೊಸದಲ್ಲ. ಅದು ಬಳಕೆ ಮಾಡದೆ ಹೊಳೆಯುತ್ತಿರಲಿಲ್ಲ. ಹೀಗಾಗಿ ಹಳೆಯ ಕಾನೂನಿಗೆ ಒಂದಿಷ್ಟು ಪಾಲಿಶ್ ಹಾಕಿದ್ದಾರೆ.

ನೋಟ್ ಬ್ಯಾನ್ ಮೂಲಕ ಕಪ್ಪು ಹಣ ಹೊಂದಿದ ಕುಳಗಳ ಬೇಟೆಗೆ ಹೊರಟ ಮೋದಿ ಇದೀಗ ಅಕ್ರಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿದವರ ಮೇಲೆ ಗುರಿ ನೆಟ್ಟಿದ್ದಾರೆ.ಲೋಕಸಭೆಯಲ್ಲಿ ಅಂಗೀಕಾರಗೊಂಡ ಪ್ರಸ್ತಾವಿತ ಆದಾಯ ತೆರಿಗೆ ತಿದ್ದುಪಡಿ ಮಸೂದೆ ಅನ್ವಯ ಘೋಷಿತ ಆದಾಯದಲ್ಲಿ ಖರೀದಿಸಿದ ಚಿನ್ನಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಪ್ಪು ಹಣವನ್ನು ಬದಲಾಯಿಸಿಕೊಳ್ಳಲು ಚಿನ್ನ ಖರೀದಿಸಿದ್ರೆ ಕಷ್ಟ. ನ್ಯಾಯಬದ್ಧವಾಗಿ ಎಷ್ಟೇ ಚಿನ್ನ ಇದ್ದರೂ ಅದಕ್ಕೆ ತೆರಿಗೆ ವಿಧಿಸಲ್ಲ. ಆದರೆ ಲೆಕ್ಕಚಾರ ಇಲ್ಲದ, ಘೋಷಿತ ಆದಾಯ ಹೊರತು ಪಡಿಸಿ ಭಾರೀ ಪ್ರಮಾಣದ ಚಿನ್ನ ಖರೀದಿಸಿದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುವುದು. ಕೃಷಿ ಆದಾಯದಿಂದ, ಪೂರ್ವಜರಿಂದ ಬಳುವಳಿಯಾಗಿ, ಸಣ್ಣ ಉಳಿತಾಯದಿಂದ ಚಿನ್ನ ಖರೀದಿಸಿದ್ರೆ ನೀವು ನೆಮ್ಮದಿಯಾಗಿರಬಹುದು.ಇನ್ನು ಯಾರು ಎಷ್ಟು ಚಿನ್ನ ಹೊಂದಿರಬೇಕು ಅನ್ನುವುದನ್ನು ಕೂಡಾ ತಿಳಿಸಲಾಗಿದೆ. ವಿವಾಹಿತ ಮಹಿಳೆ 500 ಗ್ರಾಂ, ಅವಿವಾಹಿತರು 250 ಗ್ರಾಮ ಮತ್ತು ಪುರುಷರು 100 ಗ್ರಾಂ ಚಿನ್ನ ಇಟ್ಟುಕೊಳ್ಳಲು ಅಡ್ಡಿ ಇಲ್ಲ. ಚಿನ್ನ ಖರೀದಿಯ ಆದಾಯದ ಮೂಲವನ್ನು ಮುಚ್ಚಿಡುವ ಹಾಗಿಲ್ಲ. ಸೂಕ್ತ ದಾಖಲೆ ಇಟ್ಟುಕೊಂಡು ಅದೆಷ್ಟು ಕೆಜಿ ಚಿನ್ನ ಹೊಂದಿದ್ರು ಪರವಾಗಿಲ್ಲ.ಹೀಗಾಗಿ ಕರೆನ್ಸಿಯನ್ನು ಚಿನ್ನ ಮಾಡಿಟ್ಟುಕೊಂಡವರಿಗೆ ಗ್ರಹಚಾರ ಕಾದಿದೆ ಗ್ಯಾರಂಟಿ.

Leave a Reply

Your email address will not be published. Required fields are marked *