ಲವ್ ಸೆಕ್ಸ್ ದೋಖಾ

ಲವ್ ಸೆಕ್ಸ್ ದೋಖಾ

ಪ್ರೀತಿ ಮಾಯೆ ಹುಷಾರು  ಕಣ್ಣೀರ್ ಮಾರೋ ಬಝಾರೂ ಈ ಗೀತೆ ಬರೆದವರನ್ನು ಮೆಚ್ಚಬೇಕ್ರಿ. ಪ್ರೀತಿಯಲ್ಲಿ ಒಂದಿಷ್ಟು ಎಡವಟ್ಟಾದ್ರು ಹರೋ ಹರೋ. ಮಂಗಳೂರಿನಲ್ಲೂ ಹೀಗೆ ಆಗಿದೆ. ಆಕೆ ಜೀವಕ್ಕಿಂತ ಹೆಚ್ಚು ಪ್ರೀತಿಸಿದಳು. ಮದುವೆಯಾಗುವ ಹುಡುಗ ಚೆನ್ನಾಗಿರಬೇಕು ಎಂದು ಸಾಲ ಮಾಡಿ ಪ್ರಿಯಕರನ್ನು ವಿದೇಶಕ್ಕೆ ಕಳುಹಿಸಿಕೊಟ್ಲು. ರಾಮನಿಗೆ ಶಬರಿ ಕಾದ ಹಾಗೇ ಕಾದ್ಲು. ಆದ್ರೆ ವಿದೇಶದಿಂದ ಬಂದವನು ರಾಮನಂತಿರಲಿಲ್ಲ.

ಅವಿರಿಬ್ಬರು ಮಂಗಳೂರಿನ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರು. ಈ ಸಂದರ್ಭದಲ್ಲಿ ವಾಮಂಜೂರಿನ ಅಮಿತ್ ಗೆ ಈ ಹುಡುಗಿಯ ಜೊತೆಗೆ ಪ್ರೀತಿಯಾಗಿದೆ. ಪ್ರೀತಿಯ ಅಮಲಿನಲ್ಲಿ ಇಬ್ಬರು ಮೈ ಮರೆತ್ರು ಅನ್ನುವುದು ಸತ್ಯ. ಈ ಪ್ರಕರಣದಲ್ಲಿ ಆಕೆಯ ಮೈ ಮರೆತಳು ಅನ್ನುವುದಕ್ಕಿಂತ ಅಮಿತ್ ಹಾಗೇ ಮಾಡಿದ ಅನ್ನುವುದು ಸತ್ಯ. ಮೈ ಮರೆತು ಆದ ಘಟನೆಗಳಿಂದ ತಪ್ಪಿಲ್ಲ ಅಂದುಕೊಳ್ಳುವುದಕ್ಕೆ ಅಮಿತ್ ತಂದೆ ತಾಯಿ ಕೊಟ್ಟ ಭಾಷೆ ಸಾಕಿತ್ತು. ಅಷ್ಟು ಹೊತ್ತಿಗೆ ಅಮಿತ್ ಗೆ ವಿದೇಶದಲ್ಲಿ ಕೆಲಸದ ಆಫರ್ ಬಂತು. ಒಂದ್ಸಲ ಹೋಗಿ ಬಂದ ಮೇಲೆ ಮದುವೆಯಾಗ್ತಿನಿ ಅಂದ ಮಾತು ನಂಬಿದ್ಲು. ತಾನೇ ಸಾಲ ಮಾಡಿ ಅಮಿತ್ ನನ್ನು ವಿದೇಶಕ್ಕೆ ಕಳುಹಿಸಿದ್ಲು.ವಿದೇಶದಿಂದ ಬಂದ ಮೇಲೆ ಅಮಿತ್ ಮದುವೆಯಾಗಲು ನಿರಾಕರಿಸಿದ.ಕರುಣೆ ಇಲ್ಲದ ಕಟುಕನಂತೆ ಮತ್ತೆ ವಿದೇಶಕ್ಕೆ ಹಿಂತಿರುಗಿದ ಇದೀಗ  ಹುಡುಗಿ ಮುಲ್ಕಿ ಠಾಣೆಯಲ್ಲಿ ದೂರು ಕೊಡಲಾಗಿದೆ. ಹುಡುಗ ವಿದೇಶದಲ್ಲಿರುವುದರಿಂದ ಏನೂ ಮಾಡಲಾಗುವುದಿಲ್ಲ ಅನ್ನುತ್ತಿದ್ದಾರೆ. ಪೊಲೀಸರು ಒಂದಿಷ್ಟು ತಲೆ ಖರ್ಚು ಮಾಡಿ, ಕಾನೂನಿನ ಪುಸ್ತಕ ಗಮನವಿಟ್ಟು ಓದಿದ್ರೆ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಒಂದು ಹುಡುಗಿಗೆ ಆಗಿರುವ ಅನ್ಯಾಯಕ್ಕೆ ಶಿಕ್ಷೆಯನ್ನು ಕೊಡಿಸಲು ಅವಕಾಶವಿದೆ. ಪೊಲೀಸರು ಮನಸ್ಸು ಮಾಡಬೇಕಷ್ಟೆ.

 

Leave a Reply

Your email address will not be published. Required fields are marked *