ವೈರಲ್ ಆಗಿದೆ ಕೀಚಕರ ಕಿಸ್ಸಿಂಗ್ ವಿಡಿಯೋ

ವೈರಲ್ ಆಗಿದೆ ಕೀಚಕರ ಕಿಸ್ಸಿಂಗ್ ವಿಡಿಯೋ

ಈ ವಿಡಿಯೋ ಯಾವತ್ತಿನ ವಿಡಿಯೋ ಅನ್ನುವುದು ಯಾರಿಗೂ ಗೊತ್ತಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ಮಂಗಳೂರು ಮಂದಿ ಮೊಬೈಲ್ ನಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ.ಮಂಗಳೂರು ಕಾಲೇಜು ಒಂದರ ಯೂನಿಫಾರ್ಮ್ ಇದು ಅನ್ನುತ್ತಿದ್ದಾರೆ. ಕರ್ನಾಟಕದ್ದೋ, ಬೇರೆ ರಾಜ್ಯದ್ದೋ  ಪೊಲೀಸರು ಇದರ ಮೂಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ಒಳಿತು.

ಈ ವಿಡಿಯೋ ಮಂಗಳೂರಿನಾದ್ಯಂತ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಮಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿವರು ಅನ್ನುವ ಮಾತುಗಳು ಕೇಳಿ ಬರುತ್ತಿದೆ. ವಿದ್ಯಾರ್ಥಿನಿಗೆ ಕಿಸ್ಸಿಂಗ್ ಮಾಡುತ್ತಿರುವ ದೃಶ್ಯವನ್ನು ಆತನ ಸ್ನೇಹಿತರು ಸೆರೆ ಹಿಡಿದಿದ್ದಾರೆ. ಕಿಸ್ಸಿಂಗ್ ಮಾಡುತ್ತಿರುವ ವಿದ್ಯಾರ್ಥಿಯೇ ಮೊಬೈಲ್ ನಲ್ಲಿ ಚಿತ್ರೀಕರಿಸುವಂತೆ ಸೂಚನೆ ನೀಡುತ್ತಿದ್ದಾನೆ. ವಿದ್ಯಾರ್ಥಿನಿಗೆ ಯಾವುದೋ ಅಮಲು ಪದಾರ್ಥ ನೀಡಿ ಇಂತಹ ಕೃತ್ಯ ಎಸಗಿರುವ ಸಾಧ್ಯತೆಯಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ವಿದ್ಯಾರ್ಥಿಗಳ ಗುಂಪು ಯಾವುದೇ ಕಾಮುಕರಿಗೆ ಕಮ್ಮಿ ಅಲ್ಲ ಅನ್ನುವಂತೆ ಅಟ್ಟಹಾಸಗೈದಿದೆ.ಹುಡುಗಿಯನ್ನು ಬ್ಲ್ಯಾಕ್ ಮೇಲ್ ಮಾಡುವ ಸಲುವಾಗಿ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಡಲಾಗಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ವಿಡಿಯೋ ಮಂಗಳೂರಿನಲ್ಲೇ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಮಂಗಳೂರು ಪೊಲೀಸರು ಕ್ರಮ ಕೈಗೊಳ್ಳುವುದು ಒಳಿತು. ಇಲ್ಲವಾದ್ರೆ ಅಮಾಯಕರ ಹುಡುಗಿಯರ ಮಾನ ಹರಾಜು ಹಾಕುವ ಕೀಚಕರಿಗೆ ಬುದ್ದಿಯೂ ಬರುವುದಿಲ್ಲ, ಇಂಥಹ ಕೃತ್ಯಕ್ಕೆ ಬ್ರೇಕ್ ಕೂಡಾ ಬೀಳುವುದಿಲ್ಲ.

 

Leave a Reply

Your email address will not be published. Required fields are marked *