ನನ್ನ ಪತಿ ಜೊತೆ ನಾಲ್ಕೂವರೆ ವರ್ಷದಿಂದ ಕಂಗನಾ ಡೇಟೀಂಗ್ ಮಾಡ್ತಿದ್ದಾಳೆ ಅಂದ್ರು ಜರೀನಾ ವಹಾಬ್

0
9

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಾಲ್ಕೂವರೆ ವರ್ಷಗಳಿಂದ ನನ್ನ ಗಂಡನ ಜೊತೆ ಡೇಟ್ ನಲ್ಲಿದ್ದಾಳೆ ಎಂದು ಹಿರಿಯ ನಟಿ ಜರೀನಾ ವಹಾಬ್ ಹೇಳಿದ್ದಾರೆ.

ಜರೀನಾ ವಹಾಬ್ ಈ ರೀತಿಯ ಹೇಳಿಕೆ ನೀಡಲು ಕಾರಣವಾಗಿದ್ದು ಒಂದು ಸಂದರ್ಶನ. ಕೆಲ ದಿನಗಳ ಹಿಂದೆ ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ನಾನು ಜರೀನಾರ ಮಗಳ ಸಮಾನ ಎಂದು ಹೇಳಿದ್ದರು.

ಹಲವು ವರ್ಷಗಳ ಹಿಂದೆ ನಡೆದಿದ್ದ ಘಟನೆಯನ್ನು ನೆನಪು ಮಾಡಿಕೊಂಡ ಕಂಗನಾ, ನಟ ಆದಿತ್ಯಾ ಪಾಂಚೋಲಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು. ಈ ಸಂಬಂಧ ನಾನು ಆದಿತ್ಯಾ ಪಾಂಚೋಲಿ ಹಲ್ಲೆ ಮಾಡಿದ್ದರ ಬಗ್ಗೆ ಅವರ ಪತ್ನಿ ಜರೀನಾ ವಹಾಬ್‍ರಿಗೆ ನಾನು ನಿಮ್ಮ ಮಗಳಿ(ಸನಾ)ಗಿಂತ ಚಿಕ್ಕವಳು. ಇದೆಲ್ಲಾ ನನಗೆ ಹೊಸದು. ದಯವಿಟ್ಟು ಕಾಪಾಡಿ, ನಾನು ನಿಮ್ಮ ಮಗಳ ಹಾಗಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದೇನು. ಈ ವೇಳೆ ಜರೀನಾ ನನಗೆ ಸಹಾಯ ಮಾಡಲು ಹಿಂದೇಟು ಹಾಕಿದರು ಎಂದು ಕಂಗನಾ ತಿಳಿಸಿದ್ದರು.

ಕಂಗನಾ ನನ್ನ ಗಂಡನೊಂದಿಗೆ ನಾಲ್ಕೂವರೆ ವರ್ಷಗಳಿಂದ ಡೇಟ್ ನಲ್ಲಿದ್ದಾಳೆ. ಅದು ಹೇಗೆ ಅವಳು ನನಗೆ ಮಗಳ ಸಮಾನ ಆಗುತ್ತಾಳೆ ಅಂದಿದ್ದಾರೆ. ನಾನು ಇತ್ತೀಚಿಗೆ ಮೊಬೈಲಿನಲ್ಲಿ ಒಂದು ಸುದ್ದಿ ನೋಡಿದೆ. ಅದರಲ್ಲಿ ನಾನು ಕಂಗಾನಳ ತಾಯಿ ಸಮಾನ ಎಂದು ಬರೆಯಲಾಗಿತ್ತು. ಇದೆಲ್ಲಾ ಏನೆಂಬುವುದು ಗೊತ್ತಿಲ್ಲ. ವ್ಯಕ್ತಿಗಳು ಸಂದರ್ಶನ ನೀಡುವಾಗ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು ಎಂದು ಜರೀನಾ ವಹಾಬ್ ಉತ್ತರಿಸಿದ್ದಾರೆ.

ಕಂಗನಾ ಬಾಲಿವುಡ್ ನಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಸಮಾಜದಲ್ಲಿರುವ ಒಳ್ಳೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳಬಾರದು. ಕಂಗನಾಗೆ ಸುಳ್ಳು ಹೇಳುವುದಕ್ಕಾಗಿ ನ್ಯಾಶನಲ್ ಅವಾರ್ಡ್ ಕೊಡಬೇಕು ಎಂದು ತಿರುಗೇಟು ನೀಡಿದ್ದಾರೆ.

ಕಂಗನಾ ತಮ್ಮ ಹಳೆಯ ವಿಷಯವನ್ನು ಮತ್ತೊಮ್ಮೆ ಹೇಳಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ.