ಕುಟುಂಬ ರಾಜಕಾರಣದ ಮನೆ ಗೊಂದಲದ ಗೂಡು

ಕುಟುಂಬ ರಾಜಕಾರಣದ ಮನೆ ಗೊಂದಲದ ಗೂಡು

2018ರ ಚುನಾವಣೆ ಇನ್ನೂ ಸಮಯವಿದೆ. ಜೆಡಿಎಸ್ ಚುನಾವಣೆಗೆ ಸಿದ್ದವಾಗಿದೆಯೋ ಇಲ್ಲವೋ. ಜೆಡಿಎಸ್ ವರಿಷ್ಠರ ಮನೆಯಲ್ಲಿ ಅಸಮಾಧಾನ ಹೊಗೆಯಡಲಾರಂಭಿಸಿದೆ.ಕುಮಾರಸ್ವಾಮಿ ಮತ್ತು ದೇವೇಗೌಡರು ನೀಡಿರುವ ಹೇಳಿಕೆ ಮನೆಯ ಹಿರಿಯ ಸೊಸೆ ಮತ್ತು ಮೊಮ್ಮಗನಲ್ಲಿ ಬೇಸರ ಮೂಡಿಸಿದೆ. ಒಂದು ವೇಳೆ ಮನೆಯ ಹಿರಿಯ ಸೊಸೆ ಪಕ್ಷದ ವರಿಷ್ಠರ ನಿಲುವನ್ನು ಬದಲಾಯಿಸುವಂತೆ ಮಾಡಿದ್ರೆ ತಾವು ಮತ್ತೊಮ್ಮೆ ಸ್ಪರ್ಧಿಸಲು ಸಾಧ್ಯ ಎಂದು ಮತ್ತೊಬ್ಬ ಸೊಸೆ ಯೋಚಿಸುತ್ತಿದ್ದಾರೆ. 

2018 ರ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಇಬ್ಬರು ಮಾತ್ರ ಸ್ಪರ್ಧೆ ಮಾಡಲಿದ್ದಾರೆ ಎಂಬ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಗೌಡರ ಕುಟುಂಬದಲ್ಲಿ ಅಸಮಾಧಾನ ಮೂಡಿಸಿದೆ.ಕುಮಾರಸ್ವಾಮಿ ಅವರ ಹೇಳಿಕೆ ಹೆಚ್‌.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್‌ ರೇವಣ್ಣ ಅವರಲ್ಲಿ ಬೇಸರ ಮೂಡಿಸಿದೆ.ಯಾಕಂದ್ರೆ ಇವರಿಬ್ಬರು ವಿಧಾನಸಭೆ ಪ್ರವೇಶಿಸುವ ಸಲುವಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ರು.ಭವಾನಿ ರೇವಣ್ಣ ಮೈಸೂರು ಕೆ.ಆರ್‌.ನಗರ ಮತ್ತು ಪ್ರಜ್ವಲ್‌ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ರು. ಇವರಿಬ್ಬರು ಕಣಕ್ಕೆ ಇಳಿದ್ರೆ ಪತ್ನಿ ಅನಿತಾ ಸ್ಪರ್ಧಿಸಲು ಬಯಸುತ್ತಾರೆ, ಅನಿತಾ ಕಣಕ್ಕಿಳಿದ್ರೆ ಅವರಿಬ್ಬರು ಸ್ಪರ್ಧಿಸ ಬಯಸುತ್ತಾರೆ ಅನ್ನುವುದು ಹೆಚ್.ಡಿ.ಕೆ ಭೀತಿ. ಅನಿತಾ ಕುಮಾರಸ್ವಾಮಿ ಅವರನ್ನು ರಾಮನಗರ, ಚನ್ನಪಟ್ಟಣ ಅಥವಾ ಮಾಗಡಿಯಲ್ಲಿ ಕಣಕ್ಕಳಿಸುವ ಇರಾದೆ ಇತ್ತು. ಅನಿತಾ ಅವರಿಗೆ ಆದ್ರೆ ಸೋಲು ಕಟ್ಟಿಟ್ಟ ಬುತ್ತಿ ಅನ್ನುವ ಕಾರಣದಿಂದ ಇನ್ನೂ ಯೋಚಿಸಲಾಗುತ್ತಿದೆ. ಹೀಗಾಗಿ ಕುಮಾರಸ್ವಾಮಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಒಬ್ಬರಿಗೆ ಸ್ಪರ್ಧಿಸಲು ಅನುಮತಿ ಕೊಟ್ರೆ ಒಂದೇ ಕುಟುಂಬದಿಂದ 6 ಮಂದಿ ಸ್ಪರ್ಧೆ ಮಾಡಬೇಕುತ್ತದೆ. ತಾವು ಒಂದು ಕೈ ನೋಡೋಣ ಎಂದು ನಿಖಿಲ್ ಎಂಟ್ರಿ ಕೊಟ್ರು ಅಚ್ಚರಿ ಇಲ್ಲ. ಸದ್ಯಕ್ಕೆ ಕುಟುಂಬದಿಂದ ಸ್ಪರ್ಧೆ ಮೂಡಿಸುವ ಬಗ್ಗೆ ಗೊಂದಲ ಮೂಡಿಸಲಾಗುತ್ತದೆ. ಆದ್ರೆ ಅದು ಜೆಡಿಎಸ್ ಪಕ್ಷ ಕೊನೆ ಘಳಿಗೆಯಲ್ಲಿ ಎಲ್ಲವನ್ನೂ ಬದಲಾಯಿಸುವ ತಾಕತ್ತು ಕುಟುಂಬದ ಸದಸ್ಯರಿಗಿದೆ. ಹೀಗಾಗಿ ಕೆಲ ಮಂದಿ ಲೋಕಸಭೆಗೆ ಮತ್ತೆ ಕೆಲವರು ವಿಧಾನಸಭೆ ಕಣಕ್ಕೆ ಇಳಿದ್ರೆ ಅಚ್ಚರಿಯಿಲ್ಲ.

Leave a Reply

Your email address will not be published. Required fields are marked *