ಇಸ್ರೋ ಐತಿಹಾಸಿಕ ಸಾಧನೆ : ಏಕ ಕಾಲಕ್ಕೆ 8 ಉಪಗ್ರಹಗಳು ಕಕ್ಷೆಗೆ

ಇಸ್ರೋ ಐತಿಹಾಸಿಕ ಸಾಧನೆ : ಏಕ ಕಾಲಕ್ಕೆ 8 ಉಪಗ್ರಹಗಳು ಕಕ್ಷೆಗೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಪಾಲಿಗೆ ಇವತ್ತು ಮಹತ್ವದ ದಿನವಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‍ಎಲ್‍ವಿ-35 ರಾಕೆಟ್ ಮೂಲಕ ಬೆಳಗ್ಗೆ 9.15ರ ಸುಮಾರಿಗೆ ಏಕಕಾಲಕ್ಕೆ 2 ಕಕ್ಷೆ ಸೇರೋ 8 ಉಪಗ್ರಹಗಳನ್ನ ಲಾಂಚ್ ಮಾಡಲಾಗಿದೆ. ಇವುಗಳಲ್ಲಿ 3 ಭಾರತೀಯ ಉಪಗ್ರಹಗಳಾಗಿದ್ರೆ 5 ವಿದೇಶಿ ಸ್ಯಾಟ್ ಲೈಟ್‍ಗಳಾಗಿವೆ. ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆಗಾಗಿ ಇಸ್ರೋ ಒಂದು ಉಪಗ್ರಹ ಸಿದ್ಧಪಡಿಸಿದೆ. ಇನ್ನುಳಿದ ಎರಡಲ್ಲಿ ಒಂದಾದ `ಪ್ರಥಮಂ’ ಸ್ಯಾಟಲೈಟ್ ಅನ್ನು ಬಾಂಬೆ ಐಐಟಿ ವಿದ್ಯಾರ್ಥಿಗಳು ಬಾಹ್ಯಾಕಾಶದಲ್ಲಿ  ಎಲೆಕ್ಟ್ರಾನ್ ಅಧ್ಯಯನಕ್ಕಾಗಿ ತಯಾರಿಸಿದ್ದಾರೆ. ಮತ್ತೊಂದು ಉಪಗ್ರಹವಾದ ಪೈ ಸ್ಯಾಟ್ ಅನ್ನು  ಭೂಮಿಯ ಚಿತ್ರ ತೆಗೆಯುವುದಕ್ಕಾಗಿ ಬೆಂಗಳೂರಿನ ಪಿಇಎಸ್ ಕಾಲೇಜ್ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಇದಕ್ಕಾಗಿ ಬೆಂಗಳೂರು ವಿದ್ಯಾರ್ಥಿಗಳು 4 ವರ್ಷ ಶ್ರಮ ವಹಿಸಿದ್ದಾರೆ.

isro-launched-pslv-nyusu1

ವಿದ್ಯಾರ್ಥಿ ವಿಜ್ಞಾನಿಗಳ ಉಪಗ್ರಹ ನಭಕ್ಕೆ

ಇದುವರೆಗೆ ಪರಿಣತಿ ಪಡೆದ ವಿಜ್ಞಾನಿಗಳು ಮಾತ್ರ ಇಸ್ರೋದಲ್ಲಿ ಉಪಗ್ರಹಗಳನ್ನು ಸಿದ್ಧಪಡಿಸಿ ಉಡಾವಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ವಿದ್ಯಾರ್ಥಿಗಳೇ ತಯಾರಿಸಿರೋ ಉಪಗ್ರಹ ಕಕ್ಷೆ ಸೇರಿದೆ. ಹೌದು ಬೆಂಗಳೂರಿನ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಪೈಸ್ಯಾಟ್ ಎಂಬ ಉಪಗ್ರಹವನ್ನ ತಯಾರಿಸಿದ್ದಾರೆ. ಸುಮಾರು ನಾಲ್ಕು ವರ್ಷದಿಂದ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉಪಗ್ರಹಕ್ಕಾಗಿ ಕೆಲಸ ಮಾಡಿದ್ದಾರೆ. ಇಸ್ರೋದ ನಿವೃತ್ತ ವಿಜ್ಞಾನಿಗಳಾದ ಡಾ. ವಿ.ಕೆ ಅಗರ್‍ವಾಲ್ ಹಾಗೂ ಡಾ.ವಿ. ಸಾಂಬಶಿವರಾವ್ ಕಾಲೇಜಿನ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಉಪಗ್ರಹ ಸಿದ್ಧಪಡಿಸಿದ್ದಾರೆ. ತಾವು ತಯಾರಿಸಿದ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಸಂತಸದಿಂದ ಕುಣಿದಾಡಿದ್ರು. ಇನ್ನು ಈ ಸಾಧನೆ ಬೆಂಗಳೂರಿಗೂ ಹೆಮ್ಮೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತೊಂದೆಡೆ ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರಹ ಕಕ್ಷೆಗೆ ಸೇರುತ್ತಿರುವುದು ಇಸ್ರೋ ಸಂಸ್ಥೆಗೂ ಬಲ ತಂದುಕೊಡುತ್ತದೆ. ಮುಂದಿನ ದಿನಗಳಲ್ಲಿ ಇಸ್ರೋಗೂ ಕೂಡಾ ಸಾಕಷ್ಟು ವಿಜ್ಞಾನಿಗಳ ಅವಶ್ಯಕತೆ ಇದೆ. ಕಾಲ ಬದಲಾದಂತೆ ನಾಗರಿಕ ಸಮಾಜದ ಅವಶ್ಯಕತೆಗಳು ಕೂಡಾ ಬದಲಾಗುತ್ತದೆ. ಇಂತಹ ಸಂದರ್ಭದಲ್ಲಿ ನವಚಿಂತನೆಯ ಯುವ ವಿಜ್ಞಾನಿಗಳು ಬೇಕಾಗುತ್ತಾರೆ. ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳೇ ವಿಜ್ಞಾನಿಗಳಾದ್ರೆ ಅನುಭವಿ ವಿಜ್ಞಾನಿಗಳು ದೇಶದ ಸೇವೆಗೆ ಲಭ್ಯರಾಗುತ್ತಾರೆ.

ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಈ ಉಪಗ್ರಹ ಸಿದ್ದವಾಗಿದೆ. 5 ಕೆ.ಜಿ ತೂಕವಿರುವ ಈ ಉಪಗ್ರಹ 670 ಕಿ.ಮೀ ದೂರ ತೆರಳಲಿದೆ. ಉಪಗ್ರಹದಲ್ಲಿ ತೊಂಭತ್ತು  ಮೆಗಾ ಪಿಕ್ಸಲ್ ನ ಒಂದು ಕ್ಯಾಮರ  ಅಳವಡಿಸಲಾಗಿದೆ..ನಕ್ಷೆ ಸೇರಿದ ನಂತರ ಭೂಮಿಯನ್ನು ಸುತ್ತುವ ಈ ಉಪಗ್ರಹ ಛಾಯಾಚಿತ್ರವನ್ನ ಸೆರೆಹಿಡಿದು ಕಳುಹಿಸುತ್ತದೆ.

6 ತಿಂಗಳಿಂದ ಒಂದು ವರ್ಷದವರೆಗೆ ಕಕ್ಷೆಯಲ್ಲಿ ಈ ಪೈಸ್ಯಾಟ್ ಉಪಗ್ರಹ ಸುತ್ತುತ್ತಿರುತ್ತದೆ. ಅಂದಹಾಗೇ ಈ ಉಪಗ್ರಹದ ಕಂಟ್ರೋಲ್ ರೂಂ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲೇ  ಇದೆ. ಕಾಲೇಜಿನ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳೇ ಉಪಗ್ರಹದ ನಿರ್ವಹಣೆ ಮಾಡಲಿದ್ದಾರೆ. ಇದಕ್ಕಾಗಿ ಕಾಲೇಜಿನಲ್ಲಿ ಆಂಟೆನಾ ಅಳವಡಿಸಿಲಾಗಿದೆ. ಇದರ ಮೂಲಕವೇ ಉಪಗ್ರಹದ ಸಂಪರ್ಕ ಪಡೆಯಲಿದ್ದಾರೆ. ಈ ಉಪಗ್ರಹಕ್ಕಾಗಿ ಪಿಇಎಸ್ ಕಾಲೇಜು ಜೊತೆ ಚೆನ್ನೈನ ಎಸ್‍ಕೆಆರ್ ಎಂಜಿನಿಯರಿಂಗ್ ಕಾಲೇಜು, ವೆಲ್‍ಟೆಕ್ ವಿಶ್ವವಿದ್ಯಾಲಯ, ಸೇಲಂನ ಸೋನಾ ಎಂಜಿನಿಯರಿಂಗ್ ಕಾಲೇಜು,  ತಿರ್ಚೂರ್‍ನ ನೆಹರೂ ಎಂಜಿನಿಯರಿಂಗ್ ಕಾಲೇಜು ಹಾಗೂ ಬೆಂಗಳೂರಿನ ಎಂಜಿನಿಯರಿಂಗ್ ಸಂಸ್ಥೆ ಕೈ ಜೋಡಿಸಿದೆ. ಇಂದು ಬೆಳಗ್ಗೆ ಪಿಇಎಸ್ ವಿವಿ ಪೈಸ್ಯಾಟ್ ಉಪಗ್ರಹ ಬೆಳಗ್ಗೆ 9.17 ಕ್ಕೆ ಉಡಾವಣೆಯಾಗಿದೆ.

ಪೈಸ್ಯಾಟ್  ಉಪಗ್ರಹದ ವಿಶೇಷತೆಗಳು:

  • ಎಸ್ – ಬ್ಯಾಂಡ್ ಫ್ರೀಕ್ವೆನ್ಸಿಯಲ್ಲಿ ಕಾರ್ಯ ನಿರ್ವಹಣೆ
  • 670 ಕಿ.ಮೀ ಎತ್ತರದಿಂದ ಫೋಟೋ ಸೆರೆ ಹಿಡಿಯತ್ತದೆ
  • 90 ಮೆಗಾ ಪಿಕ್ಷೆಲ್ ಕ್ಯಾಮೆರಾದಿಂದ ಫೋಟೋ ಕ್ಲಿಕ್ ಮಾಡುತ್ತದೆ
  • 25 ಕೆಜಿ ಪೈಸ್ಯಾಟ್ ತಯಾರಿಕೆಗೆ 1.5 ಕೋಟಿ ರೂ ವೆಚ್ಚವಾಗಿದೆ
  • ಒಂದು ವರ್ಷದವರೆಗೆ ಪೈಸ್ಯಾಟ್ ಭೂಕಕ್ಷೆಯಲ್ಲಿ ಸುತ್ತು ಹೊಡೆಯಲಿದೆ

 ಉಡಾವಣೆಯಾಗಿದೆ ದೇಶದ ಹವಾಮಾನ ಉಪಗ್ರಹ ಸ್ಕ್ಯಾಟ್ ಸ್ಯಾಟ್ -1 ಸೇರಿದಂತೆ ಅಮೆರಿಕ, ಕೆನಡಾ ದೇಶಗಳ ಉಪಗ್ರಹಗಳು ಸೇರಿ ಒಟ್ಟು ಎಂಟು ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-35 ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದೆ. ಸುಮಾರು 2 ಗಂಟೆ 15 ನಿಮಿಷಗಳ ದೀರ್ಘಾವಧಿಯಲ್ಲಿ ಇಸ್ರೊ 8 ರಾಕೆಟ್ ಗಳನ್ನು ವಿಭಿನ್ನ ಕಕ್ಷೆಗಳಿಗೆ ಸೇರಿಸಲಿದೆ. ಪಿಎಸ್ ಎಲ್ ವಿ ರಾಕೆಟ್ 377 ಕಿಲೋ ತೂಕದ ಸ್ಕಾಟ್ ಸ್ಯಾಟ್ -1 ಹಾಗೂ ಇತರೆ ಏಳು ಉಪಗ್ರಹಗಳನ್ನು ಉತ್ತರ ಧ್ರುವ ಸೂರ್ಯ ಸಮಕಾಲಿನ ಕಕ್ಷೆಗೆ ಸೇರಿಸಲಿದೆ.

ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳನ್ನು ಉಡಾಯಿಸಿದ ಭಾರತೀಯ ವಿಜ್ಞಾನಿಗಳ ಮಹಾನ್  ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶ್ಲಾಘಿಸಿದ್ದಾರೆ.

ಅತ್ತ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಪಿಎಸ್ ಎಲ್ ವಿ-ಸಿ35 ರಾಕೆಟ್ ಉಡಾವಣೆಯಾಗಿ ಸ್ಕಾಟ್ ಸ್ಯಾಟ್-1 ಉಪಗ್ರಹವನ್ನು ಕಕ್ಷೆಗೆ  ಸೇರಿಸುತ್ತಿದ್ದಂತೆಯೇ ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ದೇಶದ ಹಲವಾರು ಜನರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿತು.

ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು,7 ಇತರೇ ಉಪಗ್ರಹಗಳೊಂದಿಗೆ ಭಾರತದ ಬಹುಪಯೋಗಿ ಸ್ಕಾಟ್  ಸ್ಯಾಟ್-1 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಎಲ್ಲ ವಿಜ್ಞಾನಿಗಳಿಗೆ ಅಭಿನಂಧನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಸ್ ಎಲ್ ವಿ-ಸಿ35 ರಾಕೆಟ್ ಮೂಲಕ ಸ್ಕಾಟ್ ಸ್ಯಾಟ್-1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ವಿಜ್ಞಾನಿಗಳು ಭಾರತದ ಗೌರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಈ ಮಹತ್ತರ ಸಾಧನೆ 125 ಕೋಟಿ ಭಾರತೀಯರ ಹೃದಯಗೆದ್ದಿದ್ದು,  ವಿಶ್ವಮಟ್ಟದಲ್ಲಿ ಭಾರತೀಯ ಗೌರವ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ತನ್ನ ಮಹತ್ತರ ಸಾಧನೆ ಮೂಲಕ ಇಸ್ರೊ ಬಾಹ್ಯಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಬಾರಿ ಇದರಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಉಪಗ್ರಹವನ್ನು ಉಡಾವಣೆ ಮಾಡಿದ್ದು ವಿಶಿಷ್ಟವಾಗಿತ್ತು. ಇತ್ತೀಚೆಗಷ್ಟೇ ಇಸ್ರೊ ಒಮ್ಮೆಗೆ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ಸಾಧನೆ ಮಾಡಿತ್ತು. ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ಯುರೋಪ್ ನಂತರ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಪ್ರವೇಶಿಸಿದ್ದ ಪ್ರಥಮ ರಾಷ್ಟ್ರ ಭಾರತ ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಕ್ಷಣವನ್ನು ದಾಖಲಿಸಿತ್ತು.

Leave a Reply

Your email address will not be published. Required fields are marked *