ಇಸ್ರೊ ಐತಿಹಾಸಿಕ ಸಾಧನೆ : 8 ರಾಕೆಟ್ ಯಶಸ್ವಿ ಉಡಾವಣೆ

ಇಸ್ರೊ ಐತಿಹಾಸಿಕ ಸಾಧನೆ : 8 ರಾಕೆಟ್ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಸೋಮವಾರದಂದು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಭಾರತದ 3 ಹಾಗೂ ವಿದೇಶದ 5 ಸೇರಿ ಒಟ್ಟು 8 ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ.

2panoromicviewofpslv-c35atfirstlaunchpad-view2

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು  ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‍ಎಲ್‍ವಿ-35 ರಾಕೆಟ್ ಮೂಲಕ ಬೆಳಗ್ಗೆ 9.15ರ ಸುಮಾರಿಗೆ ಏಕಕಾಲಕ್ಕೆ 2 ಕಕ್ಷೆ ಸೇರೋ 8 ಉಪಗ್ರಹಗಳನ್ನ ಉಡಾವಣೆ ಮಾಡಲಾಗಿದೆ.. ಇವುಗಳಲ್ಲಿ 3 ಭಾರತೀಯ ಉಪಗ್ರಹಗಳಾಗಿದ್ರೆ 5 ಫಾರಿನ್ ಸ್ಯಾಟಲೈಟ್‍ಗಳಾಗಿವೆ. ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆಗಾಗಿ ಇಸ್ರೊ 1 ಉಪಗ್ರಹ ಸಿದ್ಧಪಡಿಸಿದೆ. ಇನ್ನುಳಿದ ಎರಡಲ್ಲಿ ಒಂದಾದ `ಪ್ರಥಮಂ’ ಸ್ಯಾಟಲೈಟ್ ಅನ್ನ ಬಾಂಬೆ ಐಐಟಿ ವಿದ್ಯಾರ್ಥಿಗಳು ಬಾಹ್ಯಾಕಾಶದಲ್ಲಿ `ಎಲೆಕ್ಟ್ರಾನ್’ ಅಧ್ಯಯನಕ್ಕಾಗಿ ತಯಾರಿಸಿದ್ದಾರೆ. ಮತ್ತೊಂದು ಉಪಗ್ರವಾದ `ಪೈಸ್ಯಾಟ್’ನಿಂದ `ಭೂಮಿಯ ಚಿತ್ರ’ ತೆಗೆಯೋದಕ್ಕಾಗಿ ಬೆಂಗಳೂರಿನ ಪಿಇಎಸ್ ಕಾಲೇಜ್ ವಿದ್ಯಾರ್ಥಿಗಳು 4 ವರ್ಷ ಶ್ರಮವಹಿಸಿ ರೆಡಿ ಮಾಡಿದ್ದಾರೆ.

ಇಸ್ರೊ ನಿವೃತ್ತ ವಿಜ್ಞಾನಿಗಳಾದ ಡಾ. ವಿ.ಕೆ ಅಗರ್‍ವಾಲ್ ಹಾಗೂ ಡಾ.ವಿ. ಸಾಂಬಶಿವರಾವ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಉಪಗ್ರಹ ಸಿದ್ಧಪಡಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಈ ಉಪಗ್ರಹ ಸಿದ್ದವಾಗಿದೆ. 5 ಕೆ.ಜಿ ತೂಕವಿರುವ ಈ ಉಪಗ್ರಹ 670 ಕಿ.ಮೀ ದೂರ ತೆರಳಲಿದೆ. ಉಪಗ್ರಹದಲ್ಲಿ ಮೂರು ಮೆಗಾ ಪಿಕ್ಸಲ್ ನ ಒಂದು ಕ್ಯಾಮರ ಅಳವಡಿಸಲಾಗಿದೆ..ನಕ್ಷೆ ಸೇರಿದ ನಂತರ ಭೂಮಿಯನ್ನು ಸುತ್ತುವ ಈ ಉಪಗ್ರಹ ಛಾಯಾಚಿತ್ರವನ್ನ ಸೆರೆಹಿಡಿದು ಕಳಸುತ್ತದೆ.

Leave a Reply

Your email address will not be published. Required fields are marked *