ತಂದೆಯ ವಯಸ್ಸಿನ ನಟನ ಜೊತೆ ಪ್ರಣಯದಲ್ಲಿದ್ದಾಳಂತೆ ಹಾಟ್ ಬೆಡಗಿ ನಮಿತಾ..?

ಬೆಂಗಳೂರು: ಸ್ಯಾಂಡಲ್‍ವುಡ್, ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಹೆಸರು ಮಾಡಿರುವ ಹಾಟ್ ಆ್ಯಂಡ್ ಸೆಕ್ಸಿ ನಟಿ ನಮಿತಾ ಮುಖೇಶ್ ವೆಂಕವಾಲ್ ಈಗ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಈಗ ಹರಿದಾಡುತ್ತಿದೆ.

16 ರಿಂದ 60ರ ವಯಸ್ಸಿನ ತನಕದ ಅಭಿಮಾನಿಗಳನ್ನು ಹೊಂದಿರುವ ನಮಿತಾ ಹುಟ್ಟಿದ್ದು ಗುಜರಾತ್ ನಲ್ಲಿ. ಆದರೆ ಖ್ಯಾತಿಗೆ ಬಂದಿದ್ದು ಮಾತ್ರ ಸೌಥ್ ಸಿನಿ ಅಂಗಳದಲ್ಲಿ. 15 ವರ್ಷಕ್ಕೇ ಮಾಡೆಲ್ ಆದ ನಮಿತಾ 2002ರಲ್ಲಿ ಟಾಲಿವುಡ್ ನ ‘ಸೊಂತಂ’ ಎಂಬ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದರು. ಹೀಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ದಕ್ಷಿಣ ಭಾರತ ಟಾಪ್ ನಟರ ಜೊತೆ ಹೆಜ್ಜೆ ಹಾಕಿದ್ದಾರೆ.

ಯಾರನ್ನ ಮದ್ವೆ ಆಗ್ತಾರೆ?: ಆಗಾಗ ನಮಿತಾರ ಹೆಸರು ಕೆಲ ನಟರ ಹೆಸರಿನ ಜೊತೆ ಥಳುಕು ಹಾಕಿಕೊಳ್ಳುತ್ತಿತ್ತು. ಆದರೆ ಅದು ಮದುವೆ ತನಕ ಬರುತ್ತಿರಲಿಲ್ಲ. ಫಸ್ಟ್ ಟೈಮ್ ನಮಿತಾ ಮದುವೆಯ ವಿಚಾರದ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅವರು ಬಹುಭಾಷಾ ನಟ, ಹಿರಿಯ ಕಲಾವಿದ ಶರತ್ ಬಾಬು ಅವರನ್ನು ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

35ರ ಹರೆಯದ ನಮಿತಾ 66ರ ವರ್ಷದ ಶರತ್ ಬಾಬುರನ್ನು ಮದುವೆಯಾಗ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಶರತ್ ಬಾಬುವಿಗೆ ಈಗಾಗಲೇ ಎರಡು ಮದುವೆಯಾಗಿದೆ. ಶರತ್ ಬಾಬು ತಮ್ಮ ಎರಡನೇ ಮದುವೆಯಾಗುವಾಗ ನಾನು ಇನ್ನೂ 35 ವರ್ಷದ ಯುವಕನಂತೆಯೇ ಇದ್ದು ನನ್ನಲ್ಲಿನ್ನೂ ಅದಮ್ಯ ಉತ್ಸಾಹವಿದೆ ಅಂತಾ ಹೇಳಿದ್ದರು. ಈಗ ನಮಿತಾರ ಜೊಗೆ ಮೂರನೇ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡುತ್ತಿದ್ದಾರೆ ಎಂಬ ಗುಮಾನಿಗಳು ಹಬ್ಬಿವೆ.

ಈ ಬಗ್ಗೆ ನಮಿತಾ ಹಾಗೂ ಶರತ್ ಬಾಬು ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಇತ್ತೀಚೆಗೆ ನಮಿತಾ ಮಲೆಯಾಳಂ ಸೂಪರ್ ಹಿಟ್ `ಪುಲಿಮುರುಗನ್’ ಚಿತ್ರದಲ್ಲಿ ಬಿಟ್ರೇ ಬೇರೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಒಂದು ಲೆಕ್ಕದಲ್ಲಿ ನಮಿತಾ ಸಖತ್ ಫ್ರೀಯಾಗಿದ್ದಾರೆ. ತನ್ನ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ನಮಿತಾ ತಾಳಿಗೆ ಕತ್ತು ಕೊಡಲು ಸಿದ್ಧವಾಗ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.