ಡೈವೋರ್ಸ್ ಕೇಳಿದ್ದೇ ತಪ್ಪಾಯ್ತು – ಪತ್ನಿಯ ತಲೆಗೆ ಮಚ್ಚಿನೇಟು ನೀಡಿದ ಪತಿ

0
4

ಚಿಕ್ಕಬಳ್ಳಾಪುರ: ವಿಚ್ಛೇದನ ಕೇಳಿದ ಪತ್ನಿ ಜೊತೆ ಜಗಳ ತೆಗೆದ ಗಂಡ ಆಕೆ ಮೇಲೆ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಶಾಂತಾನಾಯಕ್ ಎಂಬಾತನೇ ತನ್ನ ಪತ್ನಿಯ ಮೇಲೆ ಹಲ್ಲೆಗೈದ ಪತಿ. ಶಾಂತಾನಾಯಕ್ 6 ವರ್ಷಗಳ ಹಿಂದೆ ರೋಜಿಬಾಯ್ ಎಂಬವರನ್ನು ಮದುವೆಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರೋಜಿಬಾಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಪತ್ನಿ ವಿಚ್ಛೇದನ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಶಾಂತಾನಾಯಕ್ ಕೊಲೆಗೆ ಯತ್ನಿಸಿದ್ದಾನೆ. ಮಹಿಳೆಯ ಚೀರಾಟ ಕೇಳಿದ ಅಕ್ಕಪಕ್ಕದ ಜನ ಶಾಂತಕುಮಾರ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೋಜಿಬಾಯ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.