‘ಕಿಚ್ಚ’ನಿಗೋಸ್ಕರ ರೈಸನ್ ಚಿತ್ರ ತಂಡವೇ ಬೆಂಗಳೂರಿಗೆ ಬಂತು!

0
6

ಬೆಂಗಳೂರು: ಕಿಚ್ಚ ಸುದೀಪ್ ಗೋಸ್ಕರ ಹಾಲಿವುಡ್ ಬೆಂಗಳೂರಿಗೆ ಬರುತ್ತದೆ ಎನ್ನುವ ವಿಷಯವನ್ನು ಈ ಹಿಂದೆ ನಾವು ಹೇಳಿದ್ದೇವೆ. ಅದು ಹೇಗೆ ಸುಳ್ಳಾಗೋಕೆ ಸಾಧ್ಯ ಹೇಳಿ. ಹಾಲಿವುಡ್ ನವರು ಸುದೀಪ್ ಗಾಗಿ ಬೆಂಗಳೂರಿಗೆ ಬರೋದನ್ನು ಹೇಳಿದ ಮೇಲೆ ಬಂದಿರೋದನ್ನೂ ಹೇಳಬೇಕು ತಾನೇ? ಯೆಸ್ ಮೊನ್ನೆಯಷ್ಟೆ ಬೆಂಗಳೂರಿನಲ್ಲಿರುವ ಕಿಚ್ಚನ ಮನೆಗೆ ಹಾಲಿವುಡ್ ಚಿತ್ರತಂಡ ಬಂದಿತ್ತು.

ಕಿಚ್ಚನ ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿತ್ತು. ಕಳೆದ ಒಂದು ಸುದ್ದಿಗೋಷ್ಠಿಯಲ್ಲಿ ಕಿಚ್ಚ ಹಾಲಿವುಡ್ ತಂಡದವರು ಬೆಂಗಳೂರಿಗೆ ಬರೋದಾಗಿ ಹೇಳಿದ್ದರು. ಆ ವಿಷಯ ನಿಮಗೂ ತಿಳಿಸಿದೀವಿ. ಇದೀಗ ಆ ಹಾಲಿವುಡ್ ತಂಡವೇ ಕಿಚ್ಚನ ಮನೆ ಅಂಗಳಕ್ಕೆ ಬಂದಿಳಿದಿದೆ.

ಸಿನಿಮಾ ರಿಯಾಲಿಟಿ ಶೋ ಎಂದು ಸಿಕ್ಕಾಪಟ್ಟೆ ಬ್ಯುಸಿ ಇರುವ ಕಿಚ್ಚ ವಿದೇಶಕ್ಕೆ ಹೋಗಿ ಚಿತ್ರಕಥೆ ಕೇಳಿ ಫೋಟೋಶೂಟ್ ಮುಗಿಸಿ ಬರೋದು ಆಗದ ಮಾತು. ಹೀಗಾಗಿಯೇ ಬಿಡುವಿಲ್ಲದ ಕಿಚ್ಚನಿಗಾಗಿ ಹಾಲಿವುಡ್ ನ ರೈಸನ್ ಚಿತ್ರತಂಡ ಸಿನಿಮಾ ಕಥೆ ಹೇಳೋಕೆ ಬೆಂಗಳೂರಿಗೆ ಆಗಮಿಸಿದೆ.

ಕಿಚ್ಚ ಫಸ್ಟ್ ಟೈಂ ಇಂಗ್ಲಿಷ್ ಚಿತ್ರವೊಂದರಲ್ಲಿ ಅಭಿನಯಿಸುತ್ತಿರೋದು. ಹೀಗಾಗಿ ಆ ಚಿತ್ರತಂಡ ಬೆಂಗಳೂರಿಗೆ ಬಂದಾಗ ಸುದ್ದಿಗೋಷ್ಠಿ ಏರ್ಪಡಿಸೋದಾಗಿ ಕಿಚ್ಚ ಹೇಳಿದ್ದರು. ಆದರೆ ಬಿಡುವಿಲ್ಲದ ಕಾರಣ ಸುದ್ದಿಗೋಷ್ಠಿ ಜರುಗಲಿಲ್ಲ. ಆದರೆ ಹಾಲಿವುಡ್ ಟೀಮ್ ಬೆಂಗಳೂರಿಗೆ ಬರೋದು ಮಿಸ್ ಆಗಲಿಲ್ಲ.

ಆಸ್ಟ್ರೇಲಿಯಾದಿಂದ ರೈಸನ್ ನಿರ್ದೇಶಕ ಎಡ್ಡಿ ಆರ್ಯ ಹಾಗೂ ರೈಸನ್ ನಿರ್ಮಾಪಕ ಬೆಂಗಳೂರಿಗೆ ಆಗಮಿಸಿದ್ದರು. ಕಿಚ್ಚನ ಮನೆಯಲ್ಲಿ ಒಂದಿಷ್ಟು ಸಮಯ ಕಳೆದು ಕಿಚ್ಚನ ಮನೆಯಲ್ಲಿಯೇ ಭರ್ಜರಿ ಬಾಡೂಟ ಮಾಡಿದ್ದರು.

ಕಿಚ್ಚ ಅಭಿನಯಿಸಬೇಕಾಗಿರುವ ಹಾಲಿವುಡ್ ಚಿತ್ರ ರೈಸನ್ ಶೂಟಿಂಗ್ ಈಗಾಗಲ್ಲೇ ಶುರುವಾಗಿದೆ. ಆದರೆ ಕಿಚ್ಚನ ಭಾಗದ ಚಿತ್ರೀಕರಣ ಶುರುವಾಗಿಲ್ಲ. ಅದಕ್ಕಿಂತ ಮುಂಚೆ ಬೆಂಗಳೂರಿನಲ್ಲಿಯೇ ಫೋಟೋಶೂಟ್ ಮಾಡಿಕೊಂಡು ವಾಪಸ್ ಆಸ್ಟ್ರೇಲಿಯಾಕ್ಕೆ ತೆರಳಲಿದೆ ರೈಸನ್ ಚಿತ್ರತಂಡ. ಅಂದಹಾಗೆ ಕಿಚ್ಚ ಇಲ್ಲಿ ಕಮಾಂಡೋ ಪಾತ್ರದಲ್ಲಿ ಮಿಂಚಲಿದ್ದಾರೆ.

ಒಂದು ವೇಳೆ ಅದು ನಿಜವಾದರೆ ಈಗಾಗಲ್ಲೇ `ಹೆಬ್ಬುಲಿ’ ಚಿತ್ರದಲ್ಲಿ ಕಿಚ್ಚ ಮಿಲಿಟರಿ ಕಮಾಂಡೋ ಪಾತ್ರದಲ್ಲಿ ಭರ್ಜರಿಯಾಗಿ ಮಿಂಚಿದ್ದರು. ಇದರಿಂದ ಇಂಪ್ರೆಸ್ ಆಗಿಯೇ ರೈಸನ್ ಗೆ ಕಿಚ್ಚನೇ ಸೂಕ್ತ ಎಂದು ಹಾಲಿವುಡ್ ತಂಡ ಕಾಯುತ್ತಿದೆ ಎನ್ನಲಾಗುತ್ತಿದೆ.

ಕಿಚ್ಚನದ್ದು ಮಿಲಿಟರಿ ಪಾತ್ರ ಅಂದಮೇಲೆ ರೈಸನ್ ದೇಶ-ವಿದೇಶಗಳ ಒಟ್ಟಾರೆ ಕಥೆಯನ್ನು ಹೊಂದಿರುತ್ತೆ. ಕಿಚ್ಚ ಭಾರತೀಯ ಮಿಲಿಟರಿ ಪಡೆಯ ಕಮಾಂಡೋ ಆಗಿರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹೀಗಾಗಿ ರೈಸನ್ ಚಿತ್ರದಲ್ಲಿ ಭಾರತದ ಒಬ್ಬ ಶ್ರೇಷ್ಠ ನಟರೇ ಬೇಕಾಗಿದ್ದು, ಕಿಚ್ಚನೇ ಸೂಕ್ತವೆಂದು ತಂಡ ತೀರ್ಮಾನಿಸಿದೆಯಂತೆ.

ಇದೇ ತಿಂಗಳಿಂದ ಕಿಚ್ಚನ ಪೈಲ್ವಾನ್ ಚಿತ್ರೀಕರಣ ಶುರುವಾಗಲಿದೆ. ಜೊತೆಗೆ ರಿಯಾಲಿಟಿ ಶೋ ಹೋಸ್ಟಿಂಗ್ ಜವಾಬ್ದಾರಿ ಇದೆ. ಇದೆಲ್ಲ ಕಂಪ್ಲೀಟ್ ಆದ ಮೇಲೆ ಕಿಚ್ಚ ವಿದೇಶಕ್ಕೆ ತೆರಳಿ ಹಾಲಿವುಡ್ ಚಿತ್ರದ ಶೂಟಿಂಗ್ ಮುಗಿಸಲಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಅದೇನೇ ಇದ್ದರೂ ಸ್ಟೈಲಿಶ್ ಸ್ಟಾರ್ ಕಿಚ್ಚನ ಹಾಲಿವುಡ್ ಗೆಟಪ್ ಹೇಗಿರುತ್ತೆ ಎಂದು ನೋಡೋಕೆ ಕಿಚ್ಚನ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.

LEAVE A REPLY

Please enter your comment!
Please enter your name here