ಭಿನ್ನಮತರಲ್ಲೇ ಭಿನ್ನಮತ – ಮರಳಿ ತೆನೆ ಹೊತ್ತ ಮಹಿಳೆ ಮನೆಗೆ ಗೋಪಾಲಯ್ಯ

ಭಿನ್ನಮತರಲ್ಲೇ ಭಿನ್ನಮತ – ಮರಳಿ ತೆನೆ ಹೊತ್ತ ಮಹಿಳೆ ಮನೆಗೆ ಗೋಪಾಲಯ್ಯ

ಜೆಡಿಎಸ್ ಭಿನ್ನರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮೀ ಲೇ ಔಟ್ ಶಾಸಕ ಕೆ.ಗೋಪಾಲಯ್ಯ ಭಿನ್ನರ ಗುಂಪಿಗೆ ಕೈ ಕೊಟ್ಟು ಕುಮಾರಸ್ವಾಮಿ ಕೈ ಹಿಡಿದಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಇದೊಂದು ಕ್ಷಿಪ್ರ ಬೆಳವಣಿಗೆಯಾಗಿದ್ದು,ಸ್ವಾಮೀಜಿಯೊಬ್ಬರ ಮಧ್ಯಸ್ಥಿಕೆ ಕಾರಣದಿಂದ ಗೋಪಾಲಯ್ಯ ಮರಳಿ ತೆನೆ ಹೊತ್ತ ಮಹಿಳೆಯೊಂದಿಗೆ ಸೇರಿಕೊಂಡಿದ್ದಾರೆ. ಆದ್ರೆ ಗೋಪಾಲಯ್ಯ ಮರಳಿ ಪಕ್ಷಕ್ಕೆ ಬಂದಿರುವ ಹಿಂದಿನ ಕಾರಣಗಳು ಹತ್ತು ಹಲವು.

ನಿನ್ನೆ ಜೆಡಿಎಸ್ ಭಿನ್ನರ ಗುಂಪು ಸಿಎಂ ಸಿದ್ದರಾಮಯ್ಯ ಭೇಟಿಗೆ ಹೊರಟಿತ್ತು.ಗೋಪಾಲಯ್ಯ ಕೂಡಾ ಹೋಗಬೇಕಾಗಿತ್ತು.ಆದ್ರೆ ಭಿನ್ನರಿಗೆ ಟಾಟಾ ಹೇಳಿ ಅವರು ಆದಿಚುಂಚನಗಿರಿ ಮಠ ಸೇರಿದ್ರು.  ಬಳಿಕ ಮಠಕ್ಕೆ ನೀಡಿದ ಕುಮಾರಸ್ವಾಮಿಯವರೊಂದಿಗೆ ಆದಿಚುಂಚನಶ್ರೀಗಳು ಸಂಧಾನ ಮಾತುಕತೆ ನಡೆಸಿದ್ದಾರೆ. ಸ್ವಾಮೀಜಿಯವರ ಸಮ್ಮುಖದಲ್ಲೇ ಕುಮಾರಸ್ವಾಮಿ ಗೋಪಾಲಯ್ಯ ಅವರಿಗೆ ಹಾರ ಪಕ್ಷಕ್ಕೆ ಬರ ಮಾಡಿಕೊಂಡ್ರೆ, ಗೋಪಾಲಯ್ಯ ಹಾರ ಹಾಕಿ ಕ್ಷಮೆ ಕೇಳಿದ್ದಾರೆ.

ಹಾಗಾದ್ರೆ ಗೋಪಾಲಯ್ಯ ಅವರಿದೆ ದಿಢೀರ್ ಜ್ಞಾನೋದಯಕ್ಕೆ ಕಾರಣವೇನು ಅನ್ನುವ ಪ್ರಶ್ನೆ ಮೂಡುತ್ತದೆ. ಈಗಾಗಲೇ ಬಂಡಾಯ ಎದ್ದಿರುವ ಶಾಸಕರು ತಮ್ಮ ತಮ್ಮ ರಾಜಕೀಯ ನೆಲಗಳನ್ನು ಗುರುತಿಸಿಕೊಂಡಿದ್ದಾರೆ.ಒಂದಿಬ್ಬರು ಪಕ್ಷೇತರರಾಗಿ ನಿಂತು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.ಆದ್ರೆ ಗೋಪಾಲಯ್ಯ ಅವರಿಗೆ ಪಕ್ಷದ ಚಿಹ್ನೆ ಇಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಕಡೆ ಹೋಗುವುದು ಸಾಧ್ಯವಿಲ್ಲ. ನೆ.ಲ. ನರೇಂದ್ರ ಬಾಬು ಮತ್ತು ಆರ್ ವಿ ಹರೀಶ್ ಈಗಾಗಲೇ ಸಿದ್ದವಾಗಿದ್ದಾರೆ. ಹೀಗಾಗಿ ಗೋಪಾಲಯ್ಯ ಅವರಿಗೆ ಜೆಡಿಎಸ್ ಅನಿವಾರ್ಯ ಹೀಗಾಗಿ ಶ್ರೀಗಳ ಮೂಲಕ ಮತ್ತೆ ಪಕ್ಷಕ್ಕೆ ಗೋಪಾಲಯ್ಯ ಹಿಂತಿರುಗಿದ್ದಾರೆ.

 

Leave a Reply

Your email address will not be published. Required fields are marked *