ಕಮಲ್ ಜೊತೆಗಿನ ಸಂಬಂಧಕ್ಕೆ ಇತಿಶ್ರೀ ಹಾಡಿದ ಗೌತಮಿ

ಕಮಲ್ ಜೊತೆಗಿನ ಸಂಬಂಧಕ್ಕೆ ಇತಿಶ್ರೀ ಹಾಡಿದ ಗೌತಮಿ

ನಟ ಕಮಲಹಾಸನ್ ಜೊತೆಗಿನ 13 ವರ್ಷದ ಲಿವಿಂಗ್ ಟುಗೆದರ್ ಸಂಬಂಧಕ್ಕೆಕ್ಕೆ ನಟಿ ಗೌತಮಿ ತಡಿಮಲ್ಲ ಅಂತ್ಯ ಹಾಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದು, ಎಲ್ಲೂ ಕೂಡಾ ದೂರವಾಗುತ್ತಿರುವುದಕ್ಕೆ ಕಾರಣವೇನು ಅನ್ನುವುದನ್ನು ಹೇಳಿಲ್ಲ. ಕಮಲಹಾಸನ್ ಅವರನ್ನೂ ಟೀಕಿಸಿ ಕೂಡಾ ಇಲ್ಲ. ಹಾಗಾದ್ರೆ ಇವರಿಬ್ಬರು ದೂರವಾಗುತ್ತಿರಲು ಕಾರಣವೇನು ಅನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಕಮಲಹಾಸನ್ ಜೊತೆಗಿನ ಸಂಬಂಧವನ್ನು ಅಂತ್ಯಗೊಳಿಸುತ್ತಿರುವ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಲೈಫ್ ಅಂಡ್ ಡಿಸಿಸನ್ ಹೆಡ್ ಲೈನ್ ನಲ್ಲಿ ಸುದೀರ್ಘವಾಗಿ ಗೌತಮಿ ಬರೆದುಕೊಂಡಿದ್ದಾರೆ. ಇಂದು ನನ್ನ ಜೀವನದ ದುಃಖಕರ ವಿಚಾರವನ್ನು ಇಂದು ಹೇಳಲಿಚ್ಚಿಸಿದ್ದೇನೆ. ನಾನು ಮತ್ತು ಕಮಲಹಾಸನ್‌ ಇನ್ನು ಮುಂದೆ ಜೊತೆಯಾಗಿರುವುದಿಲ್ಲ. 13 ವರ್ಷಗಳ ಜೊತೆಗಿದ್ದು ಈಗ ಬೇರೆಯಾಗುತ್ತಿರುವುದು ನನ್ನ ಜೀವನದಲ್ಲಿ ಕೈಗೊಂಡ ಅತ್ಯಂತ ಕಠಿಣ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. ದೂರವಾಗುತ್ತಿರುವುದಕ್ಕೆ ಕಾರಣವನ್ನು ಹೇಳಿಲ್ಲ. ಕಮಲಹಾಸನ್‌ ಅವರನ್ನು ಎಲ್ಲಿಯೂ ಟೀಕಿಸಿಲ್ಲ.

ಬದಲಾವಣೆ ಅಗತ್ಯ, ಪ್ರತಿಯೊಬ್ಬನ ಜೀವನದಲ್ಲಿ ಬದಲಾವಣೆ ಸ್ವಾಗತಾರ್ಹ ಎನ್ನುವುದನ್ನು ನನ್ನ ಜೀವನದಲ್ಲಿ ಕಂಡುಕೊಂಡಿದ್ದೇನೆ ಎಂದು ಬರೆದಿಕೊಂಡಿರುವ ಗೌತಮಿ ಸಹಾನೂಭೂತಿ ಅಥವಾ ಆಪಾದನೆ ಮಾಡುವುದು ನನ್ನ ಉದ್ದೇಶವಾಗಿಲ್ಲ ಎಂದಿದ್ದಾರೆ. 48 ರ ಗೌತಮಿಯವರು ಪಂಚ ಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ.1998ರಲ್ಲಿ ಉದ್ಯಮಿ ಸಂದೀಪ್‌ ಭಾಟಿಯಾ ಅವರನ್ನು ವಿವಾಹವಾಗಿದ್ದ ಗೌತಮಿ ಸುಬ್ಬಲಕ್ಷ್ಮೀ ಅನ್ನುವ ಪುತ್ರಿಯನ್ನು ಹೊಂದಿದ್ದಾರೆ. 61ರ ಹರೆಯದ ಕಮಲ್‌ ಹಾಸನ್‌ ಅವರು ಡಾನ್ಸರ್‌ ವಾಣಿ ಗಣಪತಿ ಅವರೊಂದಿಗೆ 10 ವರ್ಷಗಳ ದಾಂಪತ್ಯದ ಬಳಿಕ ಸಾರಿಕಾ ಅವರೊಂದಿಗೆ ಲಿವೀಂಗ್‌ ಟುಗೆದರ್‌ ಸಂಬಂಧ ಹೊಂದಿದ್ದರು. ಶೃತಿ ಹಾಸನ್‌ ಮತ್ತು ಅಕ್ಷರಾ ಇವರಿಬ್ಬರ ಮಕ್ಕಳು.2004 ರಲ್ಲಿ ಸಾರಿಕಾ ಕಮಲ್ ದಾಂಪತ್ಯ ಅಂತ್ಯಗೊಂಡಿತ್ತು. ಬಳಿಕ ಗೌತಮಿ ಜೊತೆಗಿದ್ದರು ಕಮಲ್.

Leave a Reply

Your email address will not be published. Required fields are marked *