ನನಗೆ ನನ್ನ ಗಂಡ ಬೇಕು

ಅತ್ತೆ ಕಾಟಕ್ಕೆ ಬೇಸತ್ತ ಸೊಸೆ ಪ್ರತಿಭಟನೆ ಹಾದಿ ಹಿಡಿದಿದ್ದಾಳೆ. ವರದಕ್ಷಿಣೆ ದಾಹಕ್ಕೆ ಬಿದ್ದಿರುವ ಅತ್ತೆ ವಿರುದ್ಧ ಪೊಲೀಸರಿಗೆ ದೂರು ಕೊಟ್ರೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಅತ್ತೆ ಮಾವನಿಗೆ ರಕ್ಷಣೆ ಕೊಡುತ್ತಿದ್ದಾರೆ ಅನ್ನುವುದು ಸೊಸೆ ದೂರು. ಈ ಖಾಕಿಗಳಿಗೆ ಇನ್ನೂ ಮಹಿಳೆಯರ ಸಂಕಷ್ಟ ಅದ್ಯಾಕೆ ಅರ್ಥವಾಗುತ್ತಿಲ್ಲ ಅನ್ನುವುದೇ  ಯಕ್ಷ ಪ್ರಶ್ನೆ.

ಒಂದೂವರೆ ವರ್ಷದ ಹಿಂದೆ ಶ್ರೀನಗರ ರಮ್ಯ ಅವರಿಗೆ ಜೆಪಿ ನಗರದ ಜಲಮಂಡಳಿ ಅಧಿಕಾರಿ ಸಂತೋಷ್ ಅವರೊಂದಿಗೆ ಮದುವೆ ನಡೆದಿತ್ತು. ಮದುವೆ ವೇಳೆ ಲಕ್ಷ ಲಕ್ಷ ವರದಕ್ಷಿಣೆ ಕೊಡಲಾಗಿತ್ತು. ಆದ್ರೆ ಸಂತೋಷ್ ತಾಯಿಗೆ ಸೊಸೆ ತಂದ ವರದಕ್ಷಿಣಿ ಸಾಕಾಗಿರಲಿಲ್ಲ.ಆಕೆಯ ದಾಹ ಇಂಗಿರಲಿಲ್ಲ.ಹೀಗಾಗಿ ಪ್ರತೀ ಹಬ್ಬಕ್ಕೂ ಗಿಫ್ಟ್ ಬಯಸುತ್ತಿದ್ದಳು.ಪಾಪ ರಮ್ಯ ಕೂಡಾ ಎಷ್ಟು ದಿನ ಅಂತ ತರಲು ಸಾಧ್ಯ.ಇದರಿಂದ ರೊಚ್ಚಿಗೆದ್ದ ಅತ್ತೆ ಸೊಸೆಯನ್ನು ಮನೆಯಿಂದ ಹೊರ ಹಾಕಿದ್ದಾಳೆ.ಆದ್ರೆ ಗಂಡ ಸಂತೋಷ್ ಹೆಂಡತಿ ಜೊತೆಗೆ ಬದುಕಲು ರೆಡಿಯಾಗಿದ್ದಾನೆ. ತಾಯಿ ಭಯಕ್ಕೆ ಬಿದ್ದು ಹೆಂಡತಿಯನ್ನು ದೂರ ಇಟ್ಟಿದ್ದಾನೆ.  ರಮ್ಯ ಆದ ಅನ್ಯಾಯದ ವಿರುದ್ಧ ಪೊಲೀಸ್  ಠಾಣೆ ಮೆಟ್ಟಿಲು ಹತ್ತಿದ್ದಾರೆ. ಆದ್ರೆ ಖಾಕಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಅಂದ ಮೇಲೆ ಏನು ಮಾಡಲು ಸಾಧ್ಯ. ಹೀಗಾಗಿ ಮನೆಯ ಮುಂದೆ ಆಹೋರಾತ್ರಿ ಪ್ರತಿಭಟನೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *