ಬಿಎಂಡಬ್ಲ್ಯೂ ಕಾರ್ ಹಿಂದುರುಗಿಸಿದ ದೀಪಾ ಕರ್ಮಾಕರ್

ಬಿಎಂಡಬ್ಲ್ಯೂ ಕಾರ್ ಹಿಂದುರುಗಿಸಿದ ದೀಪಾ ಕರ್ಮಾಕರ್

ರಿಯೋ ಒಲಂಪಿಕ್ಸ್ ನಲ್ಲಿ ಸಾಧನೆ ಮಾಡಿದ ದೀಪಾ ಕರ್ಮಾಕರ್ ಗೆ ಉಡುಗೊರೆಯಾಗಿ ಹೈದರಾಬಾದ್ ಬ್ಯಾಡ್ ಮಿಂಟನ್ ಅಸೋಸಿಯೇಶನ್ ಬಿಎಂಡಬ್ಲ್ಯೂ ಕಾರ್ ನೀಡಿತ್ತು. ಆದ್ರೆ ಕಾರ್ ನಿರ್ವಹಣೆ ಕಷ್ಟ ಎಂದು ಹಿಂದುರುಗಿಸಿದ್ದಾರೆ.

ರಿಯೋ ಒಲಿಂಪಿಕ್ಸ್‍ನ ಜಿಮ್ನಾಸ್ಟಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೀಪಾ ಕರ್ಮಾಕರ್ ತಮಗೆ ಉಡುಗೊರೆಯಾಗಿ ಸಿಕ್ಕಿದ ಬಿಎಂಡಬ್ಲ್ಯೂ ಕಾರನ್ನು ವಾಪಸ್ ಕೊಡಲು ನಿರ್ಧರಿಸಿದ್ದಾರೆ.

ತ್ರಿಪುರಾದ ಅಗರ್ತಲಾದಲ್ಲಿ ಈ ರೀತಿಯ ಕಾರನ್ನು ನಿರ್ವಹಣೆ ಮಾಡುವುದು ಕಷ್ಟ. ಅಷ್ಟೇ ಅಲ್ಲದೇ ಇಲ್ಲಿ ಸರ್ವಿಸ್ ಸೆಂಟರ್ ಇಲ್ಲ. ಜೊತೆಗೆ ರಸ್ತೆಯೂ ಸರಿಯಿಲ್ಲ. ಈ ಕಾರಣಕ್ಕೆ ನಾವು ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್‍ಗೆ ತಿಳಿಸಿದ್ದೇವೆ. ಈ ಕಾರಿನ ಬದಲಾಗಿ ಕಾರಿಗೆ ಎಷ್ಟು ಬೆಲೆ ಇದೆಯೇ ಅಷ್ಟು ಹಣವನ್ನು ದೀಪಾಳ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ತಿಳಿಸಿದ್ದೇವೆ. ಈ ಮೊತ್ತವನ್ನು ಜಮೆ ಮಾಡದೇ ಇದ್ದರೂ ಅವರು ಎಷ್ಟು ಜಮೆ ಮಾಡಿದರೂ ನಮಗೆ ಸಂತೋಷ ಎಂದು ಕೋಚ್ ಹೇಳಿದ್ದಾರೆ.

ರಿಯೋದಲ್ಲಿ ಬ್ಯಾಡ್ಮಿಂಟನ್‍ನಲ್ಲಿ ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು, ಕುಸ್ತಿಯಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್, ಸಿಂಧು ಅವರ ಕೋಚ್ ಪುಲ್ಲೇಲಾ ಗೋಪಿಚಂದ್ ಜೊತೆ ವಿಶೇಷ ಸಾಧನೆ ಮಾಡಿದ್ದಕ್ಕೆ ದೀಪಾ ಕರ್ಮಾಕರ್‍ಗೆ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ  ಅಧ್ಯಕ್ಷ ಚಾಮುಂಡೇಶ್ವರ್ ನಾಥ್ ಉಡುಗೊರೆ ರೂಪದಲ್ಲಿ ಬಿಎಂಡಬ್ಲ್ಯೂ ಕಾರನ್ನು ನೀಡಿದ್ದರು.

Leave a Reply

Your email address will not be published. Required fields are marked *