ಹೂ ಮಾರುವವನ ಜೊತೆ ಶುರುವಾಗಿತ್ತು ಪ್ರೀತಿ – 10 ವರ್ಷದ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ಳು!

0
8

ಚೆನ್ನೈ: 10 ವರ್ಷಗಳಿಂದ ಪ್ರೀತಿಸಿದ್ದ ಬಳಿಕ ಪ್ರಿಯತಮೆಯೊಬ್ಬಳು ಪ್ರಿಯಕರನನ್ನೇ ತನ್ನ ಗೆಳೆಯನ ಜೊತೆ ಸೇರಿ ಕೊಲೆ ಮಾಡಿದ ಘಟನೆ ಚೆನ್ನೈನ ಗೌರಿಪೇಟೆಯಲ್ಲಿ ನಡೆದಿದೆ.

ಸುಂದರಂ (38) ಕೊಲೆಯಾದ ವ್ಯಕ್ತಿ. ಕೊಲೆ ಎಸಗಿದ ಆರೋಪದ ಅಡಿ ಯುವತಿ ಅಮುದಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಸೆಪ್ಟೆಂಬರ್ 2ರಂದು ಸುಂದರಂ ಯಾರೊಂದಿಗೋ ಫೋನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಹೋದವನು ಮತ್ತೆ ಹಿಂತಿರುಗಲಿಲ್ಲ. ಮಗ ಮನೆಗೆ ಮರಳದ ಹಿನ್ನೆಲೆಯಲ್ಲಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಮಗನನ್ನು ಪತ್ತೆ ಹಚ್ಚಿ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು.

ಕೊಲೆ ಮಾಡಿದ್ದು ಯಾಕೆ?: ಹೂ ಮಾರಾಟ ಮಾಡುತ್ತಿದ್ದ ಸುಂದರಮ್ ಗಾಂಜಾ ಸೇವಿಸಿದ ಮತ್ತಿನಲ್ಲಿ ಅಮುದಾಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದ್ದರಿಂದ ಬೇಸತ್ತ ಅಮುದಾ ತನ್ನ ಪಕ್ಕದ ಮನೆಯಲ್ಲಿರುವ ಆಟೋ ಡ್ರೈವರ್ ದಿವಾನ್ ಮೊಹಮ್ಮದ್ ಜೊತೆ ಸ್ನೇಹ ಬೆಳಸಿ ಸುಂದರಮ್ ಬಗ್ಗೆ ಹೇಳಿದ್ದಳು. ಗೆಳೆತನ ಗಾಢವಾಗುತ್ತಿದ್ದಂತೆ ಇಬ್ಬರೂ ಸೇರಿ ಸುಂದರಂ ಕೊಲೆಗೆ ಸ್ಕೆಚ್ ಹಾಕಿದ್ದಾರೆ.

ಸಪ್ಟೆಂಬರ್ 2 ರಂದು ಅಮುದಾ ಹಾಗೂ ಆಕೆಯ ಅತ್ತಿಗೆ ಇಬ್ಬರು ಸೇರಿ ಸುಂದರಂನನ್ನು ಆಟೋ ಡ್ರೈವರ್ ಮೊಹಮ್ಮದ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸುಂದರಂ ಮೇಲೆ ಅಡುಗೆಗೆ ಬಳಸುವ ಚಾಕುವಿನಿಂದ ಇರಿದಿದ್ದಾರೆ. ಇದಾದ ಬಳಿಕ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೊಹಮ್ಮದ್ ಮನೆಯ ಹಿಂದೆ ಸುಂದರಮ್ ದೇಹವನ್ನು ಹೂತಿದ್ದರು.

ಬೆಳಕಿಗೆ ಬಂದಿದ್ದು ಹೇಗೆ?: ಕೊಲೆ ಪ್ರಕರಣದಲ್ಲಿ ಮಗ ಮೊಹಮ್ಮದ್ ಆತಂಕಗೊಂಡಿರುವುದನ್ನು ತಾಯಿ ಪೊಲೀಸರಿಗೆ ತಿಳಿಸಿದ್ದರು. ವಿಚಾರಣೆ ವೇಳೆಯಲ್ಲಿ ಅಮುದಾ ತಾನು ಕೊಲೆ ಮಾಡಿದ್ದು ಯಾಕೆ ಮತ್ತು ಈ ಕೃತ್ಯಕ್ಕೆ ಸಹಕಾರ ನೀಡಿದವರು ಯಾರು ಎನ್ನುವುದನ್ನು ಹೇಳಿದಾಗ ಪ್ರಕರಣದ ರಹಸ್ಯ ಬೆಳಕಿಗೆ ಬಂದಿದೆ. ಈಗ ಮೊಹಮ್ಮದ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here