ವಿಡಿಯೋ ರಿಲೀಸ್ ಮಾಡಿದ ಯೋಧನಿಗಿತ್ತು ಕುಡಿತದ ಚಟ: ಬಿಎಸ್ ಎಫ್

ವಿಡಿಯೋ ರಿಲೀಸ್ ಮಾಡಿದ ಯೋಧನಿಗಿತ್ತು ಕುಡಿತದ ಚಟ: ಬಿಎಸ್ ಎಫ್

ಯೋಧ ತೇಜ್ ಬಹದ್ದೂರ್ ಯಾದವ್ ವಿಡಿಯೋ ಮೂಲಕ ಗಡಿ ಕಾಯುವ ಯೋಧನ ಪರಿಸ್ಥಿತಿಯನ್ನ ವಿವರಿಸಿದ್ರು.ಆದ್ರೆ ಬಿಎಸ್ ಎಫ್ ಹಿರಿಯ ಅಧಿಕಾರಿಗಳು ಮಾತ್ರ ತೇಜ್ ಬಹದ್ದೂರ್ ಯಾದವ್ ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ, ಕುಡಿತದ ಚಟಕ್ಕೆ ಒಳಗಾಗಿದ್ರು ಹಾಗಾಗಿ ಅವರಿಗೆ ಆಗಾಗ್ಗೆ ಕೌನ್ಸೆಲಿಂಗ್ ಮಾಡಿಸಲಾಗುತ್ತಿತ್ತು  ಎಂದಿದ್ದಾರೆ.

ಮಳೆ, ಗಾಳಿ ಬಿಸಿಲು ಎನ್ನದೇ ಗಡಿ ಕಾಯುವ ಯೋಧ ನಮ್ಮ ದೇಶದ ಹೆಮ್ಮೆ ಆದ್ರೆ ನಿನ್ನೆ ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ವಿಡಿಯೋ ಮೂಲಕ ಗಡಿ ಕಾಯುವ ಯೋಧನ ಪರಿಸ್ಥಿತಿಯನ್ನ ವಿವರಿಸಿದ್ರು. ಇದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ತನಿಖೆಗೆ ಆದೇಶ ನೀಡಿದ್ರು. ಆದ್ರೆ ಬಿಎಸ್ ಎಫ್ ಹಿರಿಯ ಅಧಿಕಾರಿಗಳು ಮಾತ್ರ ತೇಜ್ ಬಹದ್ದೂರ್ ಯಾದವ್ ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ, ಕುಡಿತದ ಚಟಕ್ಕೆ ಒಳಗಾಗಿದ್ರು ಹಾಗಾಗಿ ಅವರಿಗೆ ಆಗಾಗ್ಗೆ ಕೌನ್ಸೆಲಿಂಗ್ ಮಾಡಿಸಲಾಗುತ್ತಿತ್ತು ಆದ್ರೂ ಕೂಡ ಹಿರಿಯ ಅಧಿಕಾರಗಳೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ರು ಹಾಗಾಗಿ ಅವರು ಹೆಡ್ ಕ್ವಾರ್ಟರ್ಸ್ ನಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು ಎಂದಿದ್ದಾರೆ. ಹಾಗಾದ್ರೆ ತೇಜ್ ಬಹದ್ದೂರ್ ಯಾದವ್ ಮೆಂಟಲಿ ಸ್ಟೇಬಲ್ ಇಲ್ಲ ಅಂದಮೇಲೆ ಅವರನ್ನ ಸೇನೆಯಲ್ಲೇ ಉಳಿಸಿಕೊಂಡಿದ್ದು ಯಾಕೆ? ಹಾಗಾದ್ರೆ ಯೋಧ ಮಾಡಿರುವ ವಿಡಿಯೋ ಸುಳ್ಳು ಅಂತೀರಾ? ಇದಕ್ಕೆಲ್ಲಾ ತನಿಖೆ ನಡೆದ ನಂತರ ಸೂಕ್ತ ಉತ್ತರ ದೊರಕಲಿದೆ.

Leave a Reply

Your email address will not be published. Required fields are marked *