ಕಾಗೆ ಹಿಡಿಯದೇ ಕಾಗೆ ಹಾರಿಸುತ್ತಿರುವ ಖಾಕಿಗಳು

ಕಾಗೆ ಹಿಡಿಯದೇ ಕಾಗೆ ಹಾರಿಸುತ್ತಿರುವ ಖಾಕಿಗಳು

ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ಕಾಗವಾಡ ಶಾಸಕ ರಾಜು ಕಾಗೆ ಕುಟುಂಬಸ್ಥರ ಮತ್ತಷ್ಟು ರೋಚಕ ಕಥೆ ಬಯಲಾಗತೊಡಗಿದೆ. ಈ ನಡುವೆ ಹಲ್ಲೆ ಮಾಡಿದ ರೌಡಿಗಳನ್ನು ಹಿಡಿಯಲು ಖಾಕಿ ಪಡೆ ಮೀನಾ ಮೇಷ ಎಣಿಸುತ್ತಿದೆ. ಕಾಂಗ್ರೆಸ್ ಸರ್ಕಾರವಿದ್ರು ಬಿಜೆಪಿ ಶಾಸಕನ ದರ್ಬಾರ್ ನಡೆಯುತ್ತಿದೆ ಅಂದ ಮೇಲೆ ಕಾಗೆ ಕುಟುಂಬ ಅದೆಷ್ಟು ಪವರ್ ಫುಲ್ ಇರಬೇಕು. ಒಟ್ಟಿನಲ್ಲಿ ಕಾಗೆ ರಕ್ಷಣೆ ಖಾಕಿ ನಿಂತಿದೆ ಅನ್ನುವುದು ಸ್ಪಷ್ಟ.

ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ವಿವೇಕ್ ಶೆಟ್ಟಿ ಮತ್ತು ಅವರ ತಾಯಿ ಉಜ್ವಲಾ ಶೆಟ್ಟಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜು ಕಾಗೆ ಸೇರಿದಂತೆ ಅವರ ಸಹೋದರ ಶಿವನಗೌಡ, ಗಜಾನನ ಕಾಗೆ, ಮಹಾದೇವ ಕಾಗೆ ಹೀಗೆ ಒಟ್ಟು 13 ಜನರ ಮೇಲೆ ಕೊಲೆ ಯತ್ನದ ಕೇಸ್ ದಾಖಲಾಗಿದೆ. ಘಟನೆ ನಡೆದಿರುವುದಕ್ಕೆ ಸಿಸಿಟಿವಿ ದೃಶ್ಯಗಳ ಸಾಕ್ಷಿ ಇದ್ರು, ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಶಾಸಕ ಕಾಗೆ ಉಗಾರ ಗ್ರಾಮದಲ್ಲೇ ಇದ್ದಾರೆ ಅವರನ್ನು ಬಂಧಿಸುವ ದೈರ್ಯವನ್ನು ಪೊಲೀಸರು ತೋರುತ್ತಿಲ್ಲ. ಇನ್ನುಳಿದವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದ್ರೆ ರಾಜು ಕಾಗೆ ಮತ್ತು ಕುಟುಂಬಸ್ಥರನ್ನು ಬಂಧಿಸದಂತೆ ರಾಜಕೀಯ ಒತ್ತಡವಿದೆ ಅನ್ನುವುದು ಸ್ಪಷ್ಟ.

Leave a Reply

Your email address will not be published. Required fields are marked *