ಈ ಸಮೋಸಾ ತೂಕ ಒಂದೂವರೆ ಕ್ವಿಂಟಲ್ ಮಾತ್ರ! – ಗಿನ್ನೆಸ್ ದಾಖಲೆ

0
5

ಲಂಡನ್: ನಗರದ ಮಸೀದಿಯಲ್ಲಿ ತಯಾರಿಸಲಾದ 153 ಕೆ.ಜಿ. ತೂಕದ ಸಮೋಸಾ ಅತಿ ದೊಡ್ಡ ಸಮೋಸಾ ಎಂದು ಗಿನ್ನೆಸ್ ದಾಖಲೆಗಳ ಪುಟಕ್ಕೆ ಸೇರ್ಪಡೆಯಾಗಿದೆ. ಕಳೆದ ಮಂಗಳವಾರ ಪೂರ್ವ ಲಂಡನ್ ನ ಮಸೀದಿಯಲ್ಲಿ 12 ಜನ ಮುಸ್ಲಿಂ ನೆರವು ಸಂಘಟನೆಯ ಸ್ವಯಂಸೇವಕರು ಈ ಸಮೋಸಾವನ್ನು ಸತತ 15 ಗಂಟೆಗಳ ಕಾಲ ಕಷ್ಟಪಟ್ಟು ತಯಾರಿಸಿದ್ದರು.

ಗಿನ್ನೆಸ್ ದಾಖಲೆಯ ಅಧಿಕಾರಿಗಳು ಸಮೋಸಾದ ಅಳತೆಯನ್ನು ನೋಡಿ ಸಮ್ಮತಿ ಸೂಚಿಸಿದ ಬಳಿಕ ಸಮೋಸಾವನ್ನು ನಿರ್ಗತಿಕರಿಗೆ ಹಂಚಲಾಗಿದೆ. ಈ ಮುಂಚೆ 2012 ರಲ್ಲಿ ಉತ್ತರ ಇಂಗ್ಲೆಂಡ್‍ನ ಬ್ರಾಡ್‍ ಫೋರ್ಡ್ ಕಾಲೇಜು ತಯಾರಿಸಿದ 110.8 ಕೆ.ಜಿ ಸಮೋಸಾ ಗಿನ್ನೆಸ್ ದಾಖಲೆಗೆ ಪಾತ್ರವಾಗಿತ್ತು.