ಚಿಕ್ಕಮಗಳೂರು ನೋಡಿ ಫಿದಾ ಆದ್ರು ಆಮಿ ಜಾಕ್ಸನ್

0
3

ಬೆಂಗಳೂರು: ಟಾಲಿವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿರುವ ಹಾಟ್ ಬೆಡಗಿ ಆಮಿ ಜಾಕ್ಸನ್ ಸೆಪ್ಟಂಬರ್ 7 ರಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಸದ್ಯ ಆಮಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆಮಿ ಸದ್ಯ ‘ದಿ ವಿಲನ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ಛಾಪನ್ನು ಮೂಡಿಸಲು ರೆಡಿಯಾಗಿದ್ದಾರೆ. ಈ ನಡುವೆ ಆಮಿ ದೇಶದ ಹಲವೆಡೆ ಪ್ರವಾಸವನ್ನು ಕೈಗೊಂಡಿದ್ದು, ಗುರುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಆಮಿ ತಾವು ತೆಗೆಸಿಕೊಂಡ ಫೋಟೋಗಳನ್ನು ತಮ್ಮ ಇನ್‍ ಸ್ಟಾಗ್ರಾಂ ಮತ್ತು ಟ್ವಿಟರ್‍ನಲ್ಲಿ ಹರಿಬಿಟ್ಟಿದ್ದಾರೆ.

ಹಳದಿ ಬಣ್ಣದ ತುಂಡುಡುಗೆ ಧರಿಸಿರುವ ಆಮಿ ಕಟ್ಟಿಗೆಯಿಂದ ಮಾಡಲ್ಪಟ್ಟ ಗೋಪುರದಲ್ಲಿ ನಿಂತು ಸೂರ್ಯಾಸ್ತವನ್ನು ನೋಡುವ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಫೋಟೋದೊಂದಿಗೆ ಸೂರ್ಯನ ಕಿರಣಗಳು ನನ್ನ ಪಾಕೆಟ್ ನಲ್ಲಿವೆ ಎಂಬ ಅಡಿಬರಹವನ್ನು ಬರೆದಿದ್ದಾರೆ. ಇನ್ನೂ ಹೀಗೆ ಎಳನೀರು ಕುಡಿಯುತ್ತಿರುವುದು, ಹಸುವನ್ನು ಮುದ್ದಾಡುವುದು, ದೇವಸ್ಥಾನದತ್ತ ಮುಗುಳ್ನಗೆಯ ನೋಟ ಮತ್ತು ಮುಳ್ಳಯ್ಯನಗಿರಿಯ ದೇವಸ್ಥಾನದ ಮುಂದೆ ನಿಂತಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ತಾವು ಸುದೀಪ್ ಅವರೊಂದಿಗೆ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಚಿಕ್ಕಮಗಳೂರಿಗೆ ಭೇಟಿ ನೀಡಿರುವುದು ನನಗೆ ಅತೀವ ಸಂತೋಷವನ್ನು ಉಂಟು ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

ಕನ್ನಡ ಮಾಣಿಕ್ಯ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೋಡಿ ಮೊದಲ ಬಾರಿಗೆ ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಾಯಕಿಯಾಗಿ ಆಮಿ ಜಾಕ್ಸನ್ ಬಣ್ಣ ಹಚ್ಚಿದ್ದಾರೆ.

Making mates in the village we’re shooting in #EverybodyNeedsaCuddle ☺️❤️

A post shared by Amy Jackson (@iamamyjackson) on

Got that sunshine in my pocket 💛

A post shared by Amy Jackson (@iamamyjackson) on