ನಟಿ ರಚಿತಾ ರಾಮ್ ಬಿಕಿನಿ ಬಗ್ಗೆ ಹೇಳಿದ್ದು ಹೀಗೆ!

ಬೆಂಗಳೂರು: ಸ್ಯಾಂಡಲ್ ವುಡ್‍ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಬಿಕಿನಿ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.

ಸದ್ಯಕ್ಕೆ ಅವರು ನಟ ದುನಿಯಾ ವಿಜಯ್ ಜೊತೆ ಅಭಿನಯಿಸುತ್ತಿರುವ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯ ಪಾತ್ರವನ್ನು ಮಾಡುತ್ತಿದ್ದು, ಎನ್ ಆರ್ ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಅಭಿನಯಿಸಿರುವ ಸಿನಿಮಾಗಳಿಗಿಂತ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂಡೋ-ವೆಸ್ಟ್ರನ್ ಶೈಲಿಯಲ್ಲಿ ವಿನ್ಯಾಸಗೊಳಿಸಿರುವ ಕೆಂಪು ಬಣ್ಣದ ಸೀರೆಯನ್ನು ತೊಟ್ಟು ಗ್ಲಾಮರಸ್ ಆಗಿ ಮಿಂಚಲಿದ್ದಾರೆ

ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾಗ, ನಾನು ಅಭಿನಯಿಸುತ್ತಿರುವ ಎನ್ ಆರ್ ಐ ಪಾತ್ರಕ್ಕೆ ಹೆಚ್ಚಿನ ಪಾಶ್ಚಾತ್ಯ ಲುಕ್ ಅಗತ್ಯವಿದೆ. ನನ್ನ ಡೈಲಾಗ್ ಗಳೂ ಸಹ ಬಹುತೇಕ ಇಂಗ್ಲೀಷ್ ನಲ್ಲಿಯೇ ಇರುತ್ತವೆ. ಆದ್ದರಿಂದ ಇದರ ಬಗ್ಗೆ ಚಿತ್ರ ತಂಡ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಗ್ಲಾಮರ್ ಬಗ್ಗೆ ಕೂಡ ಮಾತನಾಡಿದ್ದು, ಅವರನ್ನು ಗ್ಲಾಮರ್ ಕ್ವೀನ್ ಎಂದು ಕರೆಯುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದು, ನಂತರ ಬಿಕಿನಿ ತೊಡುವುದರಿಂದ ಮಾತ್ರ ಗ್ಲಾಮರ್ ಆಗಿ ಕಾಣಿಸುವುದು ಎಂಬ ಮಾತನ್ನು ನಿರಾಕರಿಸಿದ್ದಾರೆ. ಬಿಕಿನಿ ತೊಟ್ಟು ಎಕ್ಸ್ ಪೋಸ್ ಮಾಡುವುದೇ ಗ್ಲಾಮರ್ ನ ವ್ಯಾಖ್ಯಾನ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಗ್ಲಾಮರ್ ಎಂದರೆ ಸೌಂದರ್ಯ ಹಾಗೂ ಸಮಾಧಾನಕರವಾಗಿರುವುದು ಎಂದರು. ಅಷ್ಟೇ ಅಲ್ಲದೇ ಬಿಕಿನಿಯನ್ನು ಧರಿಸದೆ ಇದ್ದರೂ ಕೂಡ ಗ್ಲಾಮರಸ್ ಆಗಿ ಕಾಣಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪ್ರೀತಮ್ ಗುಬ್ಬಿ ನಿರ್ದೇಶನದಿಂದ ಮೂಡಿ ಬರುತ್ತಿರುವ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾ `ಜಾನಿ’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ದುನಿಯಾ ವಿಜಯ್, ರಂಗಾಯಣ ರಘು ಅವರು ಕೂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.