ಅಭಿಮಾನದ ಆಫೀಮು

ಅಭಿಮಾನದ ಆಫೀಮು

 

ಅತಿಯಾದ್ರೆ  ಅಮೃತವೂ ವಿಷ. ರಾಯಚೂರಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮೇಲೆ ಸಿಕ್ಕಾಪಟ್ಟೆ ಅಭಿಮಾನ ತೋರಿಸಲು ಹೋದ ಅಭಿಮಾನಿಗಳ ಮೇಲೆ ಲಾಠಿ ಜಾರ್ಜ್ ನಡೆದಿದೆ.ಅಭಿಮಾನ ಇರಬೇಕು ಹಾಗಂತ ತಲೆ ದಾಟಬಾರದು.

ಎಂಟು ವರ್ಷಗಳ ನಂತ್ರ  ತೆಲುಗು ಮೆಗಾ ಸ್ಟಾರ್  ಚಿರಂಜೀವಿ ಸಿನಿಮಾ ಖೈದಿ ನಂಬರ್ 150 ಇಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ರಾಯಚೂರಿನಲ್ಲಿ  ಚಿತ್ರಮಂದಿರಗಳ ಮುಂದೆ ರಾತ್ರಿಯೇ ಜನ ಸೇರಿದ್ದರು.ಬೆಳಗ್ಗೆ 9 ಗಂಟೆ ಚಿತ್ರ ಪ್ರದರ್ಶನ ಎಂದು ಹೇಳಿದ್ರು ಅಭಿಮಾನಿಗಳು ಕೇಳಲಿಲ್ಲ. ರಾತ್ರಿಯೇ ಪ್ರದರ್ಶನ ತೋರಿಸಬೇಕು ಎಂದು ಪಟ್ಟು ಹಿಡಿದ್ರು. ಈ ವೇಳೆ ಗಲಾಟೆ ಪ್ರಾರಂಭವಾಯ್ತು. ಪರಿಸ್ಥಿತಿ ನಿಯಂತ್ರಿಸಲು ಬಂದ  ಪೊಲೀಸರನ್ನು ಲೆಕ್ಕಿಸಲಿಲ್ಲ. ಚಿತ್ರಮಂದಿರ, ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ರು. ಅಭಿಮಾನದ ಅಫೀಮು ಏರಿಸಿಕೊಂಡಿದ್ದ ಮಂದಿಯ ಆಕ್ರೋಶಕ್ಕೆ ಪೊಲೀಸ್ ವಾಹನಗಳು ಜಖಂಗೊಂಡಿತು. ಪೊಲೀಸರು ಗಾಯಗೊಂಡ್ರು. ನೋಡುವಷ್ಟು ನೋಡಿದ ಪೊಲೀಸರು ಕೊನೆಗೆ ಲಾಠಿ ಬೀಸಿದ್ರು.20 ಜನರನ್ನು ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡ್ರು. ನಿನ್ನೆ ರಾತ್ರಿ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಇಂದು ಚಿತ್ರ ನೋಡಲು ಹೋಗಿದ್ರೆ ಪೊಲೀಸರ ಅತಿಥಿಯಾಗುಲ ಭಾಗ್ಯದಿಂದ ತಪ್ಪಿಸಿಕೊಳ್ಳಬಹುದಿತ್ತು.

 

 

 

 

 

 

 

Leave a Reply

Your email address will not be published. Required fields are marked *