ಪ್ರೇಮಿಗಳ ಸೆಕ್ಸ್ ವೀಡಿಯೋ ಮಾಡಿ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ರು – 6 ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂತು!

0
23

ಬೆಂಗಳೂರು: ಪ್ರೇಮಿಗಳು ಏಕಾಂತದಲ್ಲಿದ್ದಾಗ ಅದನ್ನು ಚಿತ್ರೀಕರಣ ಮಾಡಿ ನಂತರ ಪೋಷಕರಿಗೆ ನೀಡುವುದಾಗಿ ಬೆದರಿಕೆ ಒಡ್ಡಿ 5 ಜನ ಕಾಮುಕರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ಆನೇಕಲ್‍ನ ಕಕ್ಕಮಲ್ಲೇಶ್ವರ ಬೆಟ್ಟದಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಆನೇಕಲ್‍ನ ಗೌರೇನಹಳ್ಳಿ ನಿವಾಸಿಗಳಾಗಿದ್ದು, ಮುರುಗೇಶ್, ರಮೇಶ್, ವಿಕಾಸ್ ಮತ್ತು ರಾಜು ಎಂದು ಗುರುತಿಸಲಾಗಿದೆ. ಯಲ್ಲರಾಜು 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಒಂದು ದಿನ ಇವರಿಬ್ಬರು ಕಕ್ಕಮಲ್ಲೇಶ್ವರ ಬೆಟ್ಟಕ್ಕೆ ಹೋಗಿದ್ದರು. ಈ ವೇಳೆ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ನಡೆದಿತ್ತು. ಇದನ್ನು ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು.

ನಂತರ ಹುಡುಗಿಗೆ ಬ್ಲಾಕ್ ಮೇಲ್ ಮಾಡಿ ನಮ್ಮೊಂದಿಗೂ ಸಹಕರಿಸಿದರೆ ಈ ವಿಷಯವನ್ನು ಮುಚ್ಚಿಡುತ್ತೇವೆ. ಇಲ್ಲವಾದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿ ಯುವತಿಯನ್ನು ಬೆಟ್ಟಕ್ಕೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಆರೋಪಿಗಳು ನಿರಂತರವಾಗಿ ಬೆದರಿಕೆ ಒಡ್ಡಿ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಈಗ ಯುವತಿ 6 ತಿಂಗಳ ಗರ್ಭಿಣಿಯಾಗಿರುವ ವಿಚಾರ ಮನೆಯವರಿಗೆ ತಿಳಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೋಷಕರು ಆನೇಕಲ್ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಆರೋಪಿಗಳ ಜೊತೆಗೆ ಈ ವಿಚಾರವನ್ನು ಮುಚ್ಚಿಟ್ಟಿದ್ದಕ್ಕೆ ಪೊಲೀಸರು ಯುವತಿಯ ಪ್ರೇಮಿ ಯಲ್ಲರಾಜುನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here