ಮತ್ತೊಂದು ಸಾಧನೆಗೆ ಸಜ್ಜಾಗಿರುವ ಇಸ್ರೋ

ಮತ್ತೊಂದು ಸಾಧನೆಗೆ ಸಜ್ಜಾಗಿರುವ ಇಸ್ರೋ

ಇಸ್ರೋ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಜನವರಿಯಲ್ಲಿ ಸಾಧನೆ ಬರೆಯಲು ಇಸ್ರೋ ನಿರ್ಧರಿಸಿದೆ. ಈ ಸಾಧನೆ ಮೂಲಕ ಇಸ್ರೋ ತನ್ನದೇ ದಾಖಲೆಯನ್ನು ಮೀರಿಸಲಿದೆ.

ಬಾಹ್ಯಾಕಾಶ ಸಂಸ್ಥೆ ಇಸ್ರೋ, ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದೆ. ಜನವರಿಯಲ್ಲಿ ಏಕಕಾಲಕ್ಕೆ 83 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಲಿದೆ. ಪಿಎಸ್‌ಎಲ್‌ವಿ-ಸಿ37 ಉಡಾವಣಾ ವಾಹಕದಿಂದ 83 ಉಪಗ್ರಹಗಳು ನಭಕ್ಕೆ ಹಾರಲಿದೆ. ಇಸ್ರೇಲ್, ಕಜಕಿಸ್ತಾನ್, ನೆದರ್ ಲ್ಯಾಂಡ್, ಸ್ವಿಜರ್ ಲ್ಯಾಂಡ್ ಮತ್ತು ಅಮೆರಿಕದ 80 ಉಪಗ್ರಹದ ಜೊತೆಗೆ ಮೂರು ಸ್ವದೇಶಿ ಉಪಗ್ರಹಗಳಾದ ಕಾರ್ಟೋಸ್ಯಾಟ್-2 ಸಿರೀಸ್, ಐಎನ್ಎಸ್-1ಎ ಮತ್ತು ಐಎನ್ಎಸ್-1ಬಿ ಉಪಗ್ರಹಗಳನ್ನು ಏಕಕಾಲಕ್ಕೆ ಇಸ್ರೋ ಉಡಾವಣೆ ಮಾಡಲಿದೆ.

ಈ ಹಿಂದೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕಕಾಲಕ್ಕೆ 20 ಉಪಗ್ರಹಗಳನ್ನು ಉಡಾವಣೆ ಮಾಡಿ ಇಸ್ರೋ ಇತಿಹಾಸ ನಿರ್ಮಿಸಿತ್ತು.ಈ ಮೂಲಕ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕಿಗೆ ಭಾರತ ಪಾತ್ರವಾಗಿತ್ತು. 83 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿದ್ರೆ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆಯಲಿದೆ.

 

Leave a Reply

Your email address will not be published. Required fields are marked *